2026-06-08 01:25:39

Puneeth Rajkumars Akash movie rereleased | ಪುನೀತ್ ರಾಜಕುಮಾರ್ ನಟನೆಯ ಆಕಾಶ್ ಚಲನಚಿತ್ರ ಮರು ಬಿಡುಗಡೆ | Speed News Kannada

Puneeth Rajkumars Akash movie rereleased | ಪುನೀತ್ ರಾಜಕುಮಾರ್ ನಟನೆಯ ಆಕಾಶ್ ಚಲನಚಿತ್ರ ಮರು ಬಿಡುಗಡೆ | Speed News Kannada

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವು ಮಾರ್ಚ್ 17ರಂದು ಇರುವುದರಿಂದ, ಇಂದು (ಮಾರ್ಚ್ 13) ಅವರ ನಟನೆಯ 'ಆಕಾಶ್' ಚಿತ್ರವನ್ನು ಮರುಬಿಡುಗಡೆ ಮಾಡಲಾಗಿದೆ. 'ಆಕಾಶ್' ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಮೋಹಕ ತಾರೆ ರಮ್ಯಾ ಅವರು ಜೋಡಿಯಾಗಿದ್ದರು. ಈ ಚಿತ್ರವು 2005ರಲ್ಲಿ ಮೊದಲ ತೆರೆ ಕಂಡಿತ್ತು. ಮಹೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು 21 ವರ್ಷಗಳ ಬಳಿಕ ಪಿಆರ್‌ಕೆ ಸಂಸ್ಥೆ ಮರುಬಿಡುಗಡೆ ಮಾಡುತ್ತಿದೆ.
ಈ ಕುರಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮ ಇನ್ಸಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಆಕಾಶ್' ಚಿತ್ರದ ಪೋಸ್ಟರ್ ಶೇರ್ ಮಾಡಿಕೊಂಡು ಈ ಚಿತ್ರವು ಯಾವ ಚಿತ್ರಮಂದಿರದಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 21 ವರ್ಷಗಳ ಹಿಂದೆ ತೆರೆಕಂಡಿದ್ದ ಈ ಚಿತ್ರವು 200ಕ್ಕೂ ಅಧಿಕ ದಿನ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಈ ಸಿನಿಮಾವನ್ನು ಪಾರ್ವತಮ್ಮ ರಾಜ್‌ಕುಮಾ‌ರ್ ಅವರು ನಿರ್ಮಾಣ ಮಾಡಿದ್ದರು. ಅವಿನಾಶ್, ಆಶಿಶ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಕಿಶೋರ್, ಆಶಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.