2026-03-07 12:36:26

Priyanka Chopra | ನಟಿ ಪ್ರಿಯಾಂಕಾ ಚೋಪ್ರಾ ಹುಳಗಳನ್ನು ತಿನ್ನುತ್ತಾರಂತೆ | Speed News Kannada

Priyanka Chopra | ನಟಿ ಪ್ರಿಯಾಂಕಾ ಚೋಪ್ರಾ ಹುಳಗಳನ್ನು ತಿನ್ನುತ್ತಾರಂತೆ | Speed News Kannada

ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ಹಾಲಿವುಡ್ ಆಕ್ಷನ್ ಸಿನಿಮಾ ದಿ ಬ್ಲಫ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಪ್ರಚಾರದ ವೇಳೆ ಅವರು ಹಂಚಿಕೊಂಡ ಒಂದು ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ತಾವು ಹುಳ ತಿಂದಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ.
ಹೌದು.. ಪ್ರಚಾರದ ಭಾಗವಾಗಿ ಅವರು ಜಿಮ್ಮಿ ಫ್ಯಾಲನ್ ನಡೆಸಿಕೊಡುವ ಜನಪ್ರಿಯ ಟಾಕ್ ಶೋ ನಲ್ಲಿ ಭಾಗವಹಿಸಿ, ನಿರೂಪಕ ಜಿಮ್ಮಿ ಫಾಲನ್ ಜೊತೆ 'ಬ್ಲಫ್' ಗೇಮ್ ಆಡಿದರು. ಈ ಆಟದಲ್ಲಿ ತಮ್ಮ ಜೀವನದ ಬಗ್ಗೆ ಮೂರು ಹೇಳಿಕೆಗಳನ್ನು ನೀಡಿದ ಪ್ರಿಯಾಂಕಾ, ಅವುಗಳಲ್ಲಿ ನಿಜ ಮತ್ತು ಸುಳ್ಳು ಯಾವುದು ಎಂದು ಜಿಮ್ಮಿ ಊಹಿಸಲು ಕೇಳಿದರು. ಅವರು ತಮ್ಮ ಬಳಿ ವಿಮಾನ ಹಾರಿಸುವ ಲೈಸೆನ್ಸ್ ಇದೆ ಎಂದು ಹೇಳಿದ್ದು, ನಾನು ಹುಳ ತಿನ್ನುತ್ತೇನೆ ಎಂದು ತಿಳಿಸಿದ್ದು ಮತ್ತು ನಾನು ನನ್ನ ಕಣ್ಣು ಗುಡ್ಡೆಗಳನ್ನು ಪ್ರತ್ಯೇಕವಾಗಿ ಚಲಿಸಬಲ್ಲೆ ಎಂದು ಹೇಳಿದ್ದಾರೆ. ಜಿಮ್ಮಿ ಮೊದಲ ಹೇಳಿಕೆಯನ್ನು ನಿಜ ಎಂದು, ಉಳಿದ ಎರಡನ್ನು ಸುಳ್ಳು ಎಂದು ಊಹಿಸಿದರು.
ಆದರೆ ನಂತರ ಪ್ರಿಯಾಂಕಾ ಮೊದಲ ಹೇಳಿಕೆಯೇ ಸುಳ್ಳು ಎಂದು ಸ್ಪಷ್ಟಪಡಿಸಿ, ತಮ್ಮ ಬಳಿ ವಿಮಾನ ಹಾರಿಸುವ ಪರವಾನಗಿ ಇಲ್ಲವೆಂದರು. ಹುಳ ತಿನ್ನುವ ಹೇಳಿಕೆ ನಿಜವಾಗಿದ್ದು, ಜಿಂಬಾಬ್ಳೆಗೆ ಭೇಟಿ ನೀಡಿದಾಗ ಅಲ್ಲಿನ ಪ್ರಸಿದ್ದ ಆಹಾರವಾದಮೊಪಾನಿ ವರ್ಮ್ಸ್ ಅನ್ನು ಸವಿದಿರುವುದಾಗಿ ಅವರು ಹೇಳಿದರು. ರೇಷ್ಮೆ ಹುಳುವಿನಂತಿದ್ದರೂ ಗಾತ್ರದಲ್ಲಿ ದೊಡ್ಡದಾಗಿರುವ ಈ ಮೊಪಾನಿ ಹುಳು ಜಿಂಬಾಬೈಯ ಸಾಂಪ್ರದಾಯಿಕ ವಿಶೇಷ ಆಹಾರಗಳಲ್ಲಿ ಒಂದಾಗಿದೆ.
ಪ್ರಿಯಾಂಕಾ ತಮ್ಮ ಕಣ್ಣು ಗುಡ್ಡೆಗಳನ್ನು ಪ್ರತ್ಯೇಕವಾಗಿ ಚಲಿಸುವಂತೆ ಮಾಡಬಲ್ಲರು, ಅಸಲಿಗೆ ತಮ್ಮ ಆ 'ಪ್ರತಿಭೆ'ಯನ್ನು ಜಿಮ್ಮಿ ಫ್ಯಾಲನ್ ಶೋನಲ್ಲಿ ಮಾಡಿ ತೋರಿಸಿದರು. ಪ್ರಿಯಾಂಕಾರ ಕಣ್ಣು ಗುಡ್ಡೆಗಳನ್ನು ನೋಡಿ ಜಿಮ್ಮಿ ಫ್ಯಾಲನ್ ಶಾಕ್ ಆದರು ಪ್ರಿಯಾಂಕಾ ಚೋಪ್ರಾ ನಟನೆಯ 'ದಿ ಬ್ಲಫ್' ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು, ಪ್ರಿಯಾಂಕಾ ಸಖತ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗಿದ್ದು, ನಂಬರ್ 1 ಸಿನಿಮಾ ಆಗಿ ಟ್ರೆಂಡ್ ಆಗುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.