2026-06-08 02:39:14

Priyank Kharge | RSS ಚಿವುಟಿದರೆ BJP ಅಳುವುದೇಕೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ | Speed News Kannada

 Priyank Kharge | RSS ಚಿವುಟಿದರೆ BJP ಅಳುವುದೇಕೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ | Speed News Kannada

ಬೆಂಗಳೂರು: ಸಂಘಪರಿವಾರ ಆರ್‌ ಎಸ್‌ ಎಸ್‌  (RSS) ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು RSS ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರು ಬಿಜೆಪಿ ಮುಖಂಡರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು RSS ಸಮರ್ಥಿಸುವುದು ಅನಿವಾರ್ಯ. ಅದಕ್ಕಾಗಿ RSS ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿ ನಾಯಕರು ತಾವು ಮಾಡಿದ ಟೀಕೆ, ತಾವು ನೀಡಿದ ಹೇಳಿಕೆಗಳೆಲ್ಲದರ ರಿಪೋರ್ಟ್ ಕಾರ್ಡನ್ನು ನಾಗಪುರಕ್ಕೆ ಕಳಿಸಿಕೊಡಬೇಕು, ಯಾರು ಹೆಚ್ಚು ತೀವ್ರವಾಗಿ ನನ್ನನ್ನು ನಿಂದಿಸಿರುತ್ತಾರೋ ಅವರಿಗೆ ಪ್ರಮೋಷನ್ ದೊರಕಲಿದೆ!
ಈ ಮೂಲಕ “RSS ಹಾಗು BJP ಗೆ ಸಂಬಂಧವಿಲ್ಲ“ ಎಂಬ ಮೋಹನ್ ಭಾಗವತರ ಹೇಳಿಕೆ ಶತಮಾನದ ಸುಳ್ಳು ಎಂಬುದನ್ನು ಬಿಜೆಪಿಯವರೇ ನಿರೂಪಿಸುತ್ತಿದ್ದಾರೆ. RSS ಚಿವುಟಿದರೆ, BJP ಅಳುವುದೇಕೆ? ಎಂದು ಪ್ರಶ್ನಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.