2026-03-07 01:18:29

Premadasas dominance | ಪ್ರೇಮದಾಸ ಪ್ರಾಬಲ್ಯ ಕೊಲಂಬೊದಲ್ಲಿ ಹೇಗಿದೆ ಭಾರತದ ಇತಿಹಾಸ ಇಲ್ಲಿದೆ ಮಾಹಿತಿ | Speed News Kannada

Premadasas dominance | ಪ್ರೇಮದಾಸ ಪ್ರಾಬಲ್ಯ ಕೊಲಂಬೊದಲ್ಲಿ ಹೇಗಿದೆ ಭಾರತದ ಇತಿಹಾಸ ಇಲ್ಲಿದೆ ಮಾಹಿತಿ | Speed News Kannada

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಹೈವೋಲೈಜ್ ಫೈಟ್ ಭಾನುವಾರ ನಡೆಯಲಿದೆ. ಈ ಪಂದ್ಯಕ್ಕಾಗಿ ಶ್ರೀಲಂಕಾದ ಆರ್ ಪ್ರೇಮದಾಸ ಕ್ರೀಡಾಂಗಣ ಆತಿಥ್ಯ ನೀಡಲಿದೆ. ಈ ಪಂದ್ಯದ ಮೇಲೆ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಈ ಪಂದ್ಯವನ್ನು ಗೆಲ್ಲುವ ಫೇವರಿಟ್ ತಂಡ ಭಾರತ.ಭಾರತ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಮಭಿಸಿದೆ. ಸೂರ್ಯ ಪಡೆ ಯುಎಸ್ಎ ಹಾಗೂ ನಮೀಬಿಯಾ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದೆ. ನಮೀಬಿಯಾ ವಿರುದ್ಧ 93 ರನ್‌ಗಳ ಜಯ ಸಾಧಿಸಿರುವ ಭಾರತ ಟಿ20 ವಿಶ್ವಕಪ್‌ನಲ್ಲಿ ತನ್ನ ದೊಡ್ಡ ಗೆಲುವು ದಾಖಲಿಸಿದೆ.ಪಾಕಿಸ್ತಾನ ಸಹ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲಿ ಪಾಕ್ ನೆದರ್ಲ್ಯಾಂಡ್ ವಿರುದ್ಧ ಸೋಲುವ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ಪಂದ್ಯದಲ್ಲಿ ಫಹೀಮ್ ಅಶ್ರಫ್ ಅಬ್ಬರಿಸಿ ಗೆಲುವಿನಲ್ಲಿ ಮಿಂಚಿದ್ದಾರೆ. ಇನ್ನು ಯುಎಸ್‌ಎ ವಿರುದ್ಧ ಸಂಘಟಿತ ಆಟದ ಪ್ರದರ್ಶನ ನೀಡಿದೆ.
Tilak Varma ಪಾಕ್ ವಿರುದ್ಧದ ಪಂದ್ಯದಲ್ಲಿ ತಿಲಕ್ ಸಿಕ್ಸರ್ ಬಾರಿಸುತ್ತಲೇ ದಾಖಲೆ
ಟೀಮ್ ಇಂಡಿಯಾ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯಲಿದೆ. ಇದೇ ಜಯದ ಓಟವನ್ನು ಮುಂದುವರೆಸುವ ಇರಾದೆ ಭಾರತ ತಂಡದ್ದಾಗಿದೆ. ಭಾರತ ಪಾಕಿಸ್ತಾನ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಈ ವಿಶ್ವಕಪ್‌ನ ರೋಚಕ ಪಂದ್ಯಗಳಲ್ಲಿ ಒಂದಾಗಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವ ಆಸೆಯನ್ನು ಸೂರ್ಯ ಪಡೆ ಹೊಂದಿದೆ.ಪ್ರೇಮದಾಸ ಪ್ರಾಬಲ್ಯ
ಪ್ರೇಮದಾಸದಲ್ಲಿ ಟೀಮ್ ಇಂಡಿಯಾ ಹಲವು ಪಂದ್ಯಗಳನ್ನು ಆಡಿದೆ. ಈ ಪಿಚ್‌ನಲ್ಲಿ ಆಡುವ ಅನುಭವ ಸಹ ಭಾರತಕ್ಕೆ ಇದೆ. ಈ ಅಂಗಳದಲ್ಲಿ ಭಾರತ ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದೆ. ಈ ಮೈದಾನದಲ್ಲಿ ಭಾರತ ಈ ವರೆಗೆ ಒಟ್ಟು 15 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 11ರಲ್ಲಿ ಜಯ ಸಾಧಿಸಿದ್ದು, 4ರಲ್ಲಿ ಸೋಲು ಕಂಡಿದೆ.ಆರ್ ಪ್ರೇಮದಾಸ್ ಮೈದಾನದಲ್ಲಿ ಭಾರತದ ಸಾಧನೆ
ಆಡಿದ ಒಟ್ಟು ಪಂದ್ಯ: 15
ಗೆಲುವು: 11
ಸೋಲು: 4
ಪ್ರೇಮದಾಸ್ ಕ್ರೀಡಾಂಗಣದಲ್ಲಿ ಎಷ್ಟು ರನ್ ಬಾರಿಸಿದರೆ ಬೆಸ್ಟ್
ಈ ಮೈದಾನದಲ್ಲಿ ಈಗಾಗಲೇ ಹಲವು ಟಿ20 ಪಂದ್ಯಗಳನ್ನು ಆಡಲಾಗಿದೆ. ಈ ವೇಳೆ ಚೇಸ್ ಮಾಡಿದ ತಂಡವೇ ಅತಿ ಹೆಚ್ಚು ಬಾರಿ ಪಂದ್ಯವನ್ನು ಗೆದ್ದಿದೆ. ಆದರೆ ಈ ಮೈದಾನದಲ್ಲಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ದಾಖಲಿಸಿದೆ. ಈ ಮೈದಾನದಲ್ಲಿ ಈ ವರೆಗೆ 158 ರನ್ ಸರಾಸರಿ ಆಗಿದೆ. ಕೊಲಂಬೊದಲ್ಲಿ ಮೊದಲು ಬ್ಯಾಟ್ ಮಾಡಿದ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲ್ಲ ಬೇಕಾದಲ್ಲಿ ಕನಿಷ್ಠ 165 ರನ್ ಬಾರಿಸುವ ಅವಶ್ಯಕತೆ ಇದೆ.ಪ್ರೇಮದಾಸ್‌ ಕ್ರೀಡಾಂಗಣ ಯಾರಿಗೆ ಸಹಾಯಕ?
ಈ ಮೈದಾನದಲ್ಲಿ ಈ ವರೆಗೆ ನಡೆದ ಟಿ20 ಪಂದ್ಯದಲ್ಲಿ ವೇಗದ ಬೌಲರ್‌ಗಳು 323 ವಿಕೆಟ್ ಹಾಗೂ ಸ್ಪಿನ್ ಬೌಲರ್ಸ್ 282 ವಿಕೆಟ್ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಈ ಪಿಚ್ ಮೇಲೆ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ.
ಪ್ರೇಮದಾಸದಲ್ಲಿ ಭಾರತದ ಅಂಕಿ ಅಂಶಗಳ ಅಮೋಘವಾಗಿವೆ. ಈ ಮೈದಾನದಲ್ಲಿ ಭಾರತವನ್ನು ಆತಿಥೇಯ ಶ್ರೀಲಂಕಾ ತಂಡ ಬಿಟ್ಟರೆ, ಆಸ್ಟ್ರೇಲಿಯಾ ಮಾತ್ರ ಸೋಲಿಸಿದೆ. ಈ ಮೈದಾನದಲ್ಲಿ ನಡೆದ ಭಾರತ 2012 ಟಿ20 ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿದೆ. ಈ ಅಂಕಿ ಅಂಶಗಳು ಭಾರತದ ಆತ್ಮವಿಶ್ವಾಸವನ್ನು ಇನ್ನು ಹೆಚ್ಚಿಸಲಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.