2026-04-23 10:58:57

Prakash Raj hits back at trolls | ಸಂಪ್ರದಾಯದಂತೆ ತಾಯಿ ಅಂತ್ಯಕ್ರಿಯೆ ಟ್ರೋಲ್ ಮಾಡಿದವರಿಗೆ ಪ್ರಕಾಶ್ ರಾಜ್ ತಿರುಗೇಟು | Speed News Kannada

Prakash Raj hits back at trolls | ಸಂಪ್ರದಾಯದಂತೆ ತಾಯಿ ಅಂತ್ಯಕ್ರಿಯೆ ಟ್ರೋಲ್ ಮಾಡಿದವರಿಗೆ ಪ್ರಕಾಶ್ ರಾಜ್ ತಿರುಗೇಟು | Speed News Kannada

ನಟ ಪ್ರಕಾಶ್ ರಾಜ್ ಅವರ ತಾಯಿ ಇತ್ತೀಚೆಗೆ ನಿಧನರಾಗಿದ್ದರು. ಅವರ ತಾಯಿಯ ನಂಬಿಕೆಯ ಅನುಸಾರ ಅಂತ್ಯಕ್ರಿಯೆ ಮಾಡಿರುವುದನ್ನು ಟ್ರೋಲ್ ಮಾಡಿದವರಿಗೆ ಪ್ರಕಾಶ್ ರಾಜ್ ಅವರು ಖಡಕ್ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಚರ್ಚ್‌ನಲ್ಲಿ ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ ನೆರವೇರಿಸಿದ್ದರು. ಬಳಿಕ ಅಂತ್ಯಕ್ರಿಯೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಅನೇಕ ಎಕ್ಸ್ ಬಳಕೆದಾರರು, ಪ್ರಕಾಶ್ ರಾಜ್ ಅವರ ಈ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ಎಲ್ಲವೂ ಬೂಟಾಟಿಕೆ ಎಂದು ಕಾಲೆಳೆದಿದ್ದರು.
ಸಾಮಾಜಿಕ ಮಾಧ್ಯಮದಲ್ಲಿನ ಟೀಕೆಗಳಿಗೆ ಉತ್ತರಿಸಿರುವ ಪ್ರಕಾಶ್ ರಾಜ್ ಅವರು, 'ಹೌದು ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ದೇವರನ್ನು ನಂಬುತ್ತಿದ್ದರು. ಅವರ ನಂಬಿಕೆಯ ಪ್ರಕಾರ, ಅವರ ಸಮಾಧಿ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು?' ಎಂದಿದ್ದಾರೆ. ಮುಂದುವರೆದು, 'ಇದು ನಾವು ಪರಸ್ಪರರ ನಂಬಿಕೆಗಳಿಗೆ ನೀಡುವ ಮೂಲಭೂತ ಗೌರವ. ಇದನ್ನು ಅರ್ಥಮಾಡಿಕೊಳ್ಳದ ದುಷ್ಟ ರಾಕ್ಷಸರನ್ನು ನೀವು ದ್ವೇಷಿಸುತ್ತೀರಾ?' ಎಂದು ಕಿಡಿಕಾರಿದ್ದಾರೆ.
ನಟ ಪ್ರಕಾಶ್ ರಾಜ್ ಅವರು, ಸಂದರ್ಶನವೊಂದರಲ್ಲಿ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, 'ನಾನು ದೇವರನ್ನು ನಂಬುವುದಿಲ್ಲ. ನನಗೆ ಅಷ್ಟು ಸಮಯವೂ ಇಲ್ಲ. ಯಾರಾದರೂ ನನ್ನನ್ನು ದೇವರನ್ನು ನಂಬುತ್ತೀರಾ ಎಂದು ಕೇಳಿದರೆ, ನನಗೆ ಸಮಯವಿಲ್ಲ ಎಂದು ಹೇಳುತ್ತೇನೆ ಹೊರತು ದೇವರು ಇದ್ದಾನೆ ಎಂದು ಹೇಳುವುದಿಲ್ಲ. ನಾನು ಈ ಜಗತ್ತಿನಲ್ಲಿ ನನ್ನಂತ ಮನುಷ್ಯರಿಗಾಗಿ ಮಾತ್ರ ಬದುಕುತ್ತೇನೆ' ಎಂದು ಹೇಳಿದ್ದರು.
ತಾಯಿಯ ನಿಧನಕ್ಕೆ ಸಂತಾಸ ಸೂಚಿಸಿದ ಎಲ್ಲರಿಗೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಾಶ್ ರಾಜ್ ಅವರು ಧನ್ಯವಾದ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.