2026-06-08 03:51:02

ಕಾಕ್ರೋಚ್ ಜನತಾ ಪಾರ್ಟಿ ಪೋಸ್ಟ್‌ ಇನ್ಮುಂದೆ ಅಧಿಕೃತ ಅಲ್ಲ: ಅಭಿಜಿತ್‌ ದಿಪ್ಕೆ ಮನವಿ| Speed News Kannada

 ಕಾಕ್ರೋಚ್ ಜನತಾ ಪಾರ್ಟಿ ಪೋಸ್ಟ್‌ ಇನ್ಮುಂದೆ ಅಧಿಕೃತ ಅಲ್ಲ: ಅಭಿಜಿತ್‌ ದಿಪ್ಕೆ ಮನವಿ| Speed News Kannada

ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರಲ್ಲಿ ಪ್ರಕಟವಾಗುವ ಯಾವುದೇ ಪೋಸ್ಟ್‌ ಅನ್ನು ಅಧಿಕೃತ ಎಂದು ಪರಿಗಣಿಸಬಾರದು ಎಂದು ಅಭಿಜಿತ್‌ ದಿಪ್ಕೆ ಮನವಿ ಮಾಡಿಕೊಂಡಿದ್ದಾರೆ.

ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಪೇಜ್‌ ಅಡ್ಮಿನ್‌ ಆಗಿರುವ ಅಭಿಜಿತ್, ‘ಎಕ್ಸ್‌’ ವೇದಿಕೆಯಲ್ಲಿ ಈ ಮನವಿ ಮಾಡಿದ್ದು, ತಮ್ಮ ಪಕ್ಷಕ್ಕೆ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ದಯವಿಟ್ಟು ಗಮನಿಸಿ. ಸದ್ಯ ನಮಗೆ ಎಲ್ಲ ವೇದಿಕೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ, ಇನ್ನುಮುಂದೆ ಪ್ರಕಟವಾಗುವ ಯಾವುದೇ ಪೋಸ್ಟ್‌ ಅನ್ನು ಕಾಕ್ರೋಚ್ ಜನತಾ ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬೃದು ಎಂದು ಬರೆದುಕೊಂಡಿದ್ದಾರೆ.

 ಕಾಕ್ರೋಚ್ ಜನತಾ ಪಕ್ಷದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇನ್‌ ಸ್ಟಾಗ್ರಾಮ್‌ ನಲ್ಲಿ ಪೇಜ್‌ ಹ್ಯಾಕ್‌ ಆಗಿದೆ. ನನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್‌ ಪುಟವೂ ಹ್ಯಾಕ್‌ ಆಗಿದೆ. ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿದೆ. ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ವೈಫಲ್ಯದಿಂದಾಗಿ ನೀಟ್‌ ಆಕಾಂಕ್ಷಿಗಳ ಜೀವ ಹೋಗಿದೆ. ಆದರೆ, ನವ ಭಾರತದ ಹೊಣೆಗಾರಿಕೆ ಕುರಿತು ಪ್ರಶ್ನಿಸಿದ್ದಕ್ಕಾಗಿ ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೆಸರಲ್ಲಿ ಪೇಜ್‌ ತೆರೆದ ಐದು ದಿನಗಳಲ್ಲೇ 1.5 ಕೋಟಿಗೂ ಹೆಚ್ಚು ಫಾಲೋವರ್ಸ್‌ ಹುಟ್ಟಿಕೊಂಡಿದ್ದರು. ಇದು ಬಿಜೆಪಿ ಫಾಲೋವರ್ಸ್‌ಗಿಂತ ಹೆಚ್ಚು. ಇದರ ಬೆನ್ನಲ್ಲೇ ಭದ್ರತೆಯ ಹೆಸರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪೇಜ್‌ ಅನ್ನು ನಿರ್ಬಂಧಿಸಲಾಗಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.