2026-05-06 05:18:09

Pooja Hegde gave a hint of Vijays victory in advance | ವಿಜಯ್ ಗೆಲುವಿನ ಸುಳಿವು ಮೊದಲೇ ನೀಡಿದ್ರಾ ಪೂಜಾ ಹೆಗ್ಡೆ | Speed News Kannada

Pooja Hegde gave a hint of Vijays victory in advance | ವಿಜಯ್ ಗೆಲುವಿನ ಸುಳಿವು ಮೊದಲೇ ನೀಡಿದ್ರಾ ಪೂಜಾ ಹೆಗ್ಡೆ | Speed News Kannada

ದಳಪತಿ ವಿಜಯ್ ಅವರು ಗೆಲುವಿನ ಸಂಭ್ರಮದಲ್ಲಿದ್ದಾರೆ. ಮೊದಲ ಚುನಾವಣೆಯಲ್ಲಿಯೇ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷವು ಯಶಸ್ವಿಯಾಗಿ ಆರಿಸಿ ಬಂದಿದೆ. ಈ ನಡುವೆ ಜನ ನಾಯಗನ್ ಸಿನಿಮಾದ ಚಿತ್ರೀಕರಣದ ವೇಳೆ ನಟಿ ಪೂಜಾ ಹೆಗ್ಡೆ ಅವರು ವಿಜಯ್ ಅವರೊಂದಿಗೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನಟಿ ಪೂಜಾ ಹೆಗ್ಡೆ ಅವರು ಸಾಮಾಜಿಕ ಮಾಧ್ಯಮ ಇನ್‌ ಸ್ಟಾಗ್ರಾಮ್‌ನಲ್ಲಿ ದಳಪತಿ ವಿಜಯ್ ಗೆಲುವು ಸಾಧಿಸಿದ ಬಳಿಕ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಊಹೆಯನ್ನು ಪೂಜಾ ಹೆಗ್ಡೆ ಮೊದಲೇ ಮಾಡಿದ್ದರು. ಅವರ ಊಹೆಯಂತೆ ವಿಜಯ್ ಗೆಲುವು ಸಾಧಿಸಿದ್ದಾರೆ. ವಿಡಿಯೊದಲ್ಲಿ 'ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ' ಎಂದು ಬರೆದಿರುವ ಬೋರ್ಡ್ ಅನ್ನು ತೋರಿಸಲಾಗಿದೆ. ನಂತರ ವಿಜಯ್ ಕಡೆಗೆ ಪೂಜಾ ಕೈ ಸನ್ನೆ ಮಾಡಿ, ಅವರು ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಆಗ ವಿಜಯ್ ನಾಚಿಕೆಗೆ ಒಳಗಾಗುತ್ತಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಬಳಕೆದಾರರೊಬ್ಬರು 'ನಿಮ್ಮ ಭವಿಷ್ಯ ನಿಜವಾಗಿದೆ' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ಪೂಜಾ ಅವರೂ ಕೂಡ ಭವಿಷ್ಯ ಹೇಳುತ್ತಾರೆ' ಎಂದು ಹಾಸ್ಯ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೊನೆಯದಾಗಿ 2022 ರ ಬೀಸ್ಟ್ ಚಿತ್ರದಲ್ಲಿ ಪೂಜಾ ಹಾಗೂ ವಿಜಯ್ ಒಟ್ಟಿಗೆ ನಟಿಸಿದ್ದರು, ಬಳಿಕ ಜನ ನಾಯಗನ್ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.