ಟಾಲಿವುಡ್‌ನ "ಬುಟ್ಟಬೊಮ್ಮ" ಪೂಜಾ ಹೆಗ್ಡೆ ಪ್ರಸ್ತುತ ಸಿನಿಮಾದಲ್ಲಿ ನಟನೆಯ ವೇಗವನ್ನು ಕಡಿಮೆ ಮಾಡಿದ್ದಾರೆ. ಒಂದು ಕಾಲದಲ್ಲಿ ಸತತ ಚಿತ್ರಗಳ ಸರಣಿಯೊಂದಿಗೆ ಮುನ್ನಡೆಯುತ್ತಿದ್ದ ನಟಿ ಪೂಜಾ ಹೆಗ್ಡೆ ಈಗ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಸತತ ಸೋಲುಗಳನ್ನು ಎದುರಿಸಿದ ಪೂಜಾ ಹೆಗ್ಡೆ ಈಗ ಕೆಲವೇ ಕೆಲವು ಸಿನಿಮಾಗಳಲ್ಲಿ ಅದೂ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ಇದರ ಪರಿಣಾಮವಾಗಿ ನಟಿ ಪೂಜಾ ಹೆಗ್ಡೆ ಸಿನಿಮಾಗಳ ಆಯ್ಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ನಟಿ ಪೂಜಾ ಹೆಗ್ಡೆ ನೋಡಲು ಸುಂದರವಾಗಿದ್ದರೂ ಅವರಿಗೆ ಆಫರ್‌ಗಳು ವಿರಳವಾಗಿವೆ. ಇದಕ್ಕೆ ಕಾರಣ ಸಾಲು ಸಾಲು ಸಿನಿಮಾಗಳ ಸೋಲು. ಈ ಸುಂದರ ನಟಿ 'ಓಕ್ಕ ಲೈಲಾ ಕೋಸಂ' ಚಿತ್ರದ ಮೂಲಕ ಟಾಲಿವುಡ್ ಗೆ ಪದಾರ್ಪಣೆ ಮಾಡಿದರು. ತಮ್ಮ ಮೊದಲ ಚಿತ್ರದಿಂದಲೇ ಪೂಜಾ ಹೆಗ್ಡೆ ತಮ್ಮ ಸೌಂದರ್ಯದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಅಲ್ಪಾವಧಿಯಲ್ಲಿಯೇ ಖ್ಯಾತಿ ಗಳಿಸಿದರು. ಅಲ್ಲದೇ ಸ್ಮಾರ್ ಹೀರೋಯಿನ್ ಪಟ್ಟವನ್ನು ಸಹ ಪಡೆದರು. ಉನ್ನತ ಶ್ರೇಣಿಯ ನಾಯಕರ ಜೊತೆ ನಟಿಸಿದರು. ತಮ್ಮ ಅಭಿನಯದಿಂದ ಹಲವು ಅಭಿಮಾನಿಗಳ ಹೃದಯಗಳನ್ನು ಗೆದ್ದರು.
ಪೂಜಾ ಹೆಗ್ಡೆ ತಮ್ಮ ವೃತ್ತಿಜೀವನದ ಆರಂಭದಲ್ಲಿ ಕೆಲವು ಹಿನ್ನಡೆಗಳನ್ನು ಎದುರಿಸಿದರೂ, ಅವರು ತಮ್ಮ ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಪರಿಣಾಮವಾಗಿ ನಟಿ ಪೂಜಾ ಹೆಗ್ಡೆಗೆ ಸಾಲು ಸಾಳು ಆಫರ್‌ಗಳು ಬರಲಾರಂಭಿಸಿದವು. ವೃತ್ತಿ ಜೀವನದ ಆರಂಭದಲ್ಲಿ ಪೂಜಾ ಹೆಗ್ಡೆ ಸತತ ಹಿಟ್ ಗಳನ್ನು ನೀಡಿದರು. ಆದರೆ ಕೆಲವೇ ಕೆಲವು ಸಿನಿಮಾಗಳ ನಂತರ ಸರಣಿ ವೈಫಲ್ಯಗಳನ್ನು ಅನುಭವಿಸಿದರು. ರಾಧೆ ಶ್ಯಾಮ್, ಆಚಾರ್ಯ ಮತ್ತು ಬೀಸ್ಟ್ ನಂತಹ ಚಿತ್ರಗಳು ಪೂಜಾ ಹೆಗ್ಡೆ ಅವರಿಗೆ ಸೋಲನ್ನು ನೀಡಿದವು. ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಪೂಜಾ ಹೆಗ್ಡೆ ಕೆಲಸ ಮಾಡುತ್ತಿದ್ದರೂ ಒಂದೇ ಒಂದು ಸಿನಿಮಾದ ಹಿಟ್‌ಗಾಗಿ ಹವಣಿಸುತ್ತಿದ್ದಾರೆ. ಪೂಜಾ ಹೆಗ್ಡೆ ಕೆಲವು ಸಿನಿಮಾಗಳಲ್ಲಿ ವಿಶೇಷ ಗೀತೆಗಳಲ್ಲಿ ಮಾತ್ರ ಕಾಣಿಸಿಕೊಂಡರು. ಇದು ಅವರಿಗೆ ಮತ್ತಷ್ಟು ಮನ್ನಣೆ ತಂದುಕೊಟ್ಟಿತು. ಪೂಜಾ ಹೆಗ್ಡೆ ಅವರ ಇತ್ತೀಚಿನ ಚಿತ್ರ ಜನ ನಾಯಗನ್ ಬಿಡುಗಡೆಗೆ ಸಿದ್ಧವಾಗಿದೆ.
ಪೂಜಾ ಹೆಗ್ಡೆ ವೈಯಕ್ತಿಕ ಬದುಕಿನಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಬೆಳವಣಿಗೆಗಳ ನಡುವೆ ನಟಿ ಪೂಜಾ ಹೆಗ್ಡೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿವೆ. ಈ ಹಿಂದೆಯೂ ಅನೇಕ ಬಾರಿ ಪೂಜಾ ಹೆಗ್ಡೆ ಮದುವೆಯ ಬಗ್ಗೆ ವದಂತಿಗಳು ಹರಡಿವೆ. ಈ ಹಿಂದೆ ಸಲ್ಮಾನ್ ಖಾನ್ ಜೊತೆ ನಟಿಸಿದ ಸಿನಿಮಾ ರಿಲೀಸ್ ಬಳಿಕವೂ ಇಂಥದ್ದೊಂದು ವದಂತಿ ಹಬ್ಬಿತ್ತು. ಪೂಜಾ ಹೆಗ್ಡೆ ಅವರು ಸಲ್ಮಾನ್ ಖಾನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೆ ಇದೊಂದು ಗಾಸಿಪ್ ಆಗಿಯೇ ಉಳಿಯಿತು.
ಆದರೆ, ಈಗ ಪೂಜಾ ಹೆಗ್ಡೆ ನಿಜವಾಗಿಯೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಪೂಜಾ ಹೆಗ್ಡೆ ಮತ್ತು ರೋಹನ್ ಮೆಹ್ರಾ ಸಂಬಂಧದಲ್ಲಿದ್ದಾರೆ ಎಂಬುದು ಬಿ ಟೌನ್‌ನಲ್ಲಿ ಕೇಳಿಬರುತ್ತಿರುವ ಮಾತು. ಈ ಹಿಂದೆ ಪೂಜಾ ಹೆಗ್ಡೆ ಮತ್ತು ರೋಹನ್ ಮೆಹ್ರಾ ಹಲವಾರು ಸಂದರ್ಭಗಳಲ್ಲಿ ಮಾಧ್ಯಮಗಳ ಮುಂದೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಮತ್ತು ರೋಹನ್ ಮೆಹ್ರಾ ಒಟ್ಟಿಗೆ ಸುತ್ತಾಡಲು ಮತ್ತು ರೆಸ್ಟೋರೆಂಟ್ಗಳಲ್ಲಿ ಊಟ ಮಾಡಲು ಹೋಗುತ್ತಿರುವುದು ಸಹ ಕಂಡುಬಂದಿದೆ. ಇದಲ್ಲದೆ ಇಬ್ಬರೂ ಈ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂಬ ಊಹಾಪೋಹಗಳಿವೆ. ಅವರು ಯಾವುದೇ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ ಪರಸ್ಪರ ಸ್ನೇಹಿತರ ಮೂಲಕ ಪರಿಚಯವಾದರು ಎಂದು ತಿಳಿದುಬಂದಿದೆ. ಪೂಜಾ ಹೆಗ್ಡೆ ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಬಹಿರಂಗಪಡಿಸುತ್ತಾರೆಯೇ ಎಂದು ಅಭಿಮಾನಿಗಳು ಈಗ ಕುತೂಹಲದಿಂದ ಕಾಯುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ ಮೂಲತಃ ಕರ್ನಾಟಕದ ಕರಾವಳಿಯ ಮಂಗಳೂರಿನವರು. ನಟಿ ಪೂಜಾ ಹೆಗ್ಡೆ ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ. ರೋಹನ್ ಮೆಹ್ರಾ ಖ್ಯಾತ ಬಾಲಿವುಡ್ ನಟ ದಿ. ವಿನೋದ್ ಮೆಹ್ರಾ ಪುತ್ರ. ಇವರು 'ಬಜಾರ್' ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದಾರೆ.