2026-06-25 04:00:25

Police issue notice to 20 people including actor Duniya Vijay|ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಪೊಲೀಸರಿಂದ ನೋಟಿಸ್‌|Speed News Kannada

Police issue notice to 20 people including actor Duniya Vijay|ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಪೊಲೀಸರಿಂದ ನೋಟಿಸ್‌|Speed News Kannada

ಜೋಂಬಿ ಡ್ರಗ್ಸ್‌ ಕುರಿತು ಯುವಕನೊಬ್ಬ ಶೇರ್‌ ಮಾಡಿದ್ದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ದುನಿಯಾ ವಿಜಯ್‌ಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಅಪಯಕಾರಿ ಜೋಂಬಿ ಡ್ರಗ್ಸ್ ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎನ್ನುವ ವಿಡಿಯೋವನ್ನು ಹೇಮಂತ್ ಎಂಬ ಯುವಕ ತನ್ನ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದ. ಯುವಕನ ವಿಡಿಯೋ ಪೂರ್ವಾಪರ ಪರಿಶೀಲಿಸದೇ ನಟ ದುನಿಯಾ ವಿಜಯ್ ಶೇರ್ ಮಾಡಿಕೊಂಡಿದ್ದರು. 

ನಾನು ಸಿನಿಮಾ ಮಾಡಿ ಡ್ರಗ್ಸ್ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ದುನಿಯಾ ವಿಜಯ್ ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋ ಈಗ ನಟನಿಗೆ ಸಂಕಷ್ಟ ತಂದೊಡ್ಡಿದೆ. ಜೋಂಬಿ ವಿಡಿಯೋ ಬಗ್ಗೆ ಅಪಪ್ರಚಾರ ಮಾಡಿದ್ದ ಯುವಕ ಹೇಮಂತ್‌ನನ್ನ ಪೊಲೀಸರು ಬಂಧಿಸಿ ಕ್ಷಮೆ ಕೇಳಿಸಿ ಬಿಡುಗಡೆ ಮಾಡಿದ್ದಾರೆ. ಆರೋಪಿ ಹೇಮಂತ್ ವಿಡಿಯೋ ಶೇರ್ ಮಾಡಿದ್ದ 20ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಕೊಟ್ಟು ‌ವಿಚಾರಣೆಗೆ ಕರೆಯಲು ಪೊಲೀಸರು ಮುಂದಾಗಿದ್ದಾರೆ. 20 ಮಂದಿಯಲ್ಲಿ ನಟ ದುನಿಯಾ ವಿಜಯ್‌ಗೂ ನೋಟಿಸ್ ಕೊಟ್ಟು ಸ್ಪಷ್ಟನೆ ಕೇಳಲು ಬಾಗಲೂರು ಪೊಲೀಸರು ಮುಂದಾಗಿದ್ದಾರೆ. ನಟ ದುನಿಯಾ ವಿಜಯ್ ಹೊರ ರಾಜ್ಯದಲ್ಲಿರುವ ಮಾಹಿತಿ ಪಡೆದಿರುವ ಪೊಲೀಸರು ವಾಟ್ಸಪ್ ಮೂಲಕ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು ಸ್ಪಷ್ಟನೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.