2026-07-23 11:32:50

Police Commissioner clarified the viral video|ವೈರಲ್ ವೀಡಿಯೊಗೆ ಸ್ಪಷ್ಟನೆ ಕೊಟ್ಟ ಪೊಲೀಸ್ ಕಮಿಷನರ್|Speed News Kannada

Police Commissioner clarified the viral video|ವೈರಲ್ ವೀಡಿಯೊಗೆ ಸ್ಪಷ್ಟನೆ ಕೊಟ್ಟ ಪೊಲೀಸ್ ಕಮಿಷನರ್|Speed News Kannada

ಸಾಮಾಜಿಕ ಜಾಲತಾಣಗಳಲ್ಲಿ ಜೊಂಬಿ ಡ್ರಗ್ಸ್ ಕುರಿತಾಗಿ ವೀಡಿಯೊಗಳು ಭಾರೀ ಸದ್ದು ಮಾಡುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಈ ಡ್ರಗ್ಸ್ ಬೆಂಗಳೂರಿನಲ್ಲೂ ಬಳಕ್ಕೆಯಾಗುತ್ತಿದ್ದೆ ಎಂಬ ವೀಡಿಯೋ ಕೂಡ ವೈರಲ್ ಆಗಿದ್ದು. ಬೆಂಗಳೂರು ಜನರಲ್ಲಿ ಆತಂಕ ಮನೆ ಮಾಡಿತ್ತು.ಅದ್ರೀಗ ಡ್ರಗ್ಸ್ ಬಗ್ಗೆ ನಗರ  ಪೊಲೀಸ್ ಆಯುಕ್ತ ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಕುರಿತಂತೆ ಪೊಲೀಸರೂ ಕೂಡ ನಿದ್ದೆ ಕೆಡಿಸಿಕೊಂಡು ತನಿಕೆ ಆರಂಭಿಸಿದ್ರು. ಆಗ ವೀಡಿಯೋದಲ್ಲಿ ಇರುವ ವ್ಯಕ್ತಿಯನ್ನು ಮೊದಲು ಪತ್ತೆಹಚ್ಚಿ ಆತನಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಇನ್ನು ಆತನ ರಿಪೋರ್ಟ್ ನಲ್ಲಿ ಯಾವುದೇ ಡ್ರಗ್ಸ್ ಸೇವನೆ ಮಾಡಿರುವುದಾಗಿ ಕಂಡುಬಂದಿಲ್ಲ.ಮತ್ತು ಸುಳ್ಳು ಮಾಹಿತಿ ನೀಡುವ ವೀಡಿಯೋವನ್ನು ವೈರಲ್ ಮಾಡಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ವೈರಲ್ ಮಾಡಿದ ಆರೋಪಿ ಕ್ಷಮೆಯಾಚಿಸಿ ವಿಡಿಯೋ ಒಂದನ್ನು ಕೂಡ ಮಾಡಿದ್ದಾನೆ. ಪೊಲೀಸರು ಇಷ್ಟಕ್ಕೆ ಬಿಟ್ಟಿಲ್ಲ . ಆ ವೀಡಿಯೋವನ್ನು ಯಾರೆಲ್ಲಾ ಷೇರ್ ಮಾಡಿದ್ದಾರೆ ಅವರೆಲ್ಲರಿಗೂ ಕೂಡ ನೋಟೀಸ್ ಜಾರಿ ಮಾಡಿದ್ದಾರೆ. ಮತ್ತು ಆಧಾರ ರಹಿತ ಮಾಹಿತಿಯನ್ನು ವೀವ್ಸ್ಗೋಸ್ಕರ ಷೇರ್ ಮಾಡೋದು, ಅದಕ್ಕೆ ಪ್ರಚೋದನೆ ಮಾಡೋದು ಕಂಡುಬಂದರೆ ಅಂತವರಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್  ಸಿಂಗ್ ಕಡಕ್ ಆಗಿ ಹೆಚ್ಚರ ಕೊಟ್ಟಿದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.