2026-03-07 12:23:36

pm modi wishes marriage of rashmika vijaySpeedNewsKannada

pm modi wishes marriage of rashmika vijaySpeedNewsKannada

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ನಾಳೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಈ ಜೋಡಿಗೆ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

ನವಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಶುಭಾಶಯ ಕೋರಿ ಪತ್ರ ರವಾನಿಸಿದ್ದಾರೆ. ಮೋದಿ ಅವರ ಈ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಮೋದಿ ಅವರು ವಿಜಯ್ ದೇವರಕೊಂಡ ಅವರ ಪೋಷಕರಾದ ಮಾಧವಿ ಮತ್ತು ಗೋವರ್ಧನ ರಾವ್ ಅವರಿಗೆ ಪತ್ರ ಬರೆದಿದ್ದಾರೆ. "ಫೆಬ್ರವರಿ 26 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಆಮಂತ್ರಣ ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಈ ಸಂಭ್ರಮದ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು" ಎಂದು ತಿಳಿಸಿದ್ದಾರೆ.

ಈ ವಿವಾಹವು ಜೀವನದ ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿರುವ ಪ್ರಧಾನಿಯವರು, ದಂಪತಿಗಳ ಜೀವನದ ಹೊಸ ಆರಂಭವನ್ನು ಸುಂದರವಾಗಿ ವಿಶ್ಲೇಷಿಸಿದ್ದಾರೆ. " ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ ಮತ್ತು ಸುಂದರ ಅಧ್ಯಾಯದ ಆರಂಭವಾಗಿದೆ. ಸಖ ಸಪ್ತಪದ ಭಾವ ಅಂದರೆ ಏಳು ಹೆಜ್ಜೆಗಳನ್ನು ಒಟ್ಟಿಗೆ ನಡೆಯುವ ಮೂಲಕ ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ" ಎಂದು ಅವರು ಶುಭ ಕೋರಿದ್ದಾರೆ.

"ವಿಜಯ್ ಮತ್ತು ರಶ್ಮಿಕಾ ಇಬ್ಬರಿಗೂ ಸಿನಿಮಾಗಳ ಸ್ಕ್ರಿಪ್ಟ್‌ ಗಳು ಹೊಸದಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿರುವ ಅವರ ನೈಜ ಜೀವನದ ಈ 'ದೈವಲಿಖಿತ' ಅಧ್ಯಾಯವು ಬೆಳ್ಳಿ ಪರದೆಯ ಮೇಲೆ ಅವರು ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಹೆಚ್ಚು ಹೊಳೆಯಲಿದೆ ಎಂಬ ನಂಬಿಕೆ ನನಗಿದೆ" ಎಂದು ಬರೆದಿದ್ದಾರೆ.
ಅಂದಹಾಗೆ ನಾಳೆ ರಾಜಸ್ಥಾನದ ಉದಯಪುರದ ಐಟಿಸಿ ಮೊಮೆಂಟೋಸ್‌ನಲ್ಲಿ ಮದುವೆ ನೆರವೇರುತ್ತಿದೆ.

ನಿನ್ನೆ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆದಿದ್ದರೆ ಇಂದು ಹಳದಿ ಮತ್ತು ಮೆಹಂದಿ ಶಾಸ್ತ್ರಗಳು ನೆರವೇರಿವೆ.



 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.