2026-06-08 01:28:54

PM Modi plays football with children in Gangtok|ಗ್ಯಾಂಗ್‌ಟಕ್‌ನಲ್ಲಿ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡಿದ ಪ್ರಧಾನಿ ಮೋದಿ|Speed News Kannada

PM Modi plays football with children in Gangtok|ಗ್ಯಾಂಗ್‌ಟಕ್‌ನಲ್ಲಿ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡಿದ ಪ್ರಧಾನಿ ಮೋದಿ|Speed News Kannada

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿ ಸಿಕ್ಕಿಂಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಜನರೊಂದಿಗೆ ಬೆರೆತಿದ್ದಾರೆ. ಗ್ಯಾಂಗ್‌ಟಕ್‌ನಲ್ಲಿ ಯುವ ವಿದ್ಯಾರ್ಥಿಗಳೊಂದಿಗೆ ಫುಟ್ಬಾಲ್ ಆಡಿ ಸಂಭ್ರಮಿಸಿರುವ ಫೋಟೋಗಳನ್ನು ತಮ್ಮ ಎಕ್ಸ್  ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ, ಈ ಕ್ಷಣವನ್ನು ಅತ್ಯಂತ ಸಂತೋಷದಾಯಕವೆಂದು ಬಣ್ಣಿಸಿದ್ದಾರೆ.

ಸಿಕ್ಕಿಂನ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ರಾಜ್ಯದ 50ನೇ ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ಬರೋಬ್ಬರಿ 4,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಗ್ಯಾಂಗ್‌ಟಕ್‌ನಲ್ಲಿ ಭವ್ಯ ರೋಡ್‌ಶೋ ನಡೆಸಿದ ಪ್ರಧಾನಿ, ಹೊಸ ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು ಹಾಗೂ 160 ಶಾಲೆಗಳಲ್ಲಿ ಐಟಿ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ತೀಸ್ತಾ ನದಿಗೆ ಅಡ್ಡಲಾಗಿ ಎರಡು ಹೊಸ ಸೇತುವೆಗಳ ನಿರ್ಮಾಣಕ್ಕೆ ಅಡಿಪಾಯ ಹಾಕುವ ಮೂಲಕ ಸಿಕ್ಕಿಂನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲಿದ್ದಾರೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.