2026-07-23 12:12:37

pm modi launch bridge in assam ಗುವಾಹಟಿ- ಉತ್ತರ ಗುವಾಹಟಿ ಸಂಪರ್ಕಿಸುವ ಸೇತುವೆ ಉದ್ಘಾಟಿಸಿದ ಪಿಎಂ ಮೋದಿ Speed News Kannada

pm modi launch bridge in assam ಗುವಾಹಟಿ- ಉತ್ತರ ಗುವಾಹಟಿ ಸಂಪರ್ಕಿಸುವ ಸೇತುವೆ ಉದ್ಘಾಟಿಸಿದ ಪಿಎಂ ಮೋದಿ Speed News Kannada

ಗುವಾಹಟಿ : ಅಸ್ಸಾಂನ ಗುವಾಹಟಿ ಮತ್ತು ಉತ್ತರ ಗುವಾಹಟಿಯನ್ನು ಸಂಪರ್ಕಿಸುವ 'ಕುಮಾರ್ ಭಾಸ್ಕರ್ ವರ್ಮ ಸೇತುವೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಈ ಸೇತುವೆಯ ವಿಶೇಷತೆಗಳೆಂದರೆ: 3,030 ಕೋಟಿ ರೂ. ವೆಚ್ಚದ 6 ಪಥದ ಸೇತುವೆ; ಈಶಾನ್ಯ ಭಾರತದ ಮೊದಲ ಎಕ್ಸ್‌ಟ್ರಾಡೋಸ್ಡ್ ಸೇತುವೆ; ಪ್ರಯಾಣದ ಸಮಯ ಕೇವಲ 7 ನಿಮಿಷಕ್ಕೆ ಇಳಿಕೆ!; ಭೂಕಂಪ ನಿರೋಧಕ ತಂತ್ರಜ್ಞಾನ ಮತ್ತು ಸುರಕ್ಷತೆಗಾಗಿ BHMS ಅಳವಡಿಸಲಾಗಿದೆ. ಸುಮಾರು 3,030 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈಶಾನ್ಯ ಭಾರತದ ಸಂಪರ್ಕ ಕ್ರಾಂತಿಯಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.

ಸೇತುವೆ ಉದ್ಘಾಟಿಸಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಲಾಗಿತ್ತು. ಕಾಂಗ್ರೆಸ್‌ ಅಸ್ಸಾಂನಲ್ಲಿ ದಂಗೆಗೆ ಪ್ರಚೋದನೆ ನೀಡಿತ್ತು ಎಂದು ಆಪಾದಿಸಿದರು.

ಅಸ್ಸಾಂನಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಭಯ ಮತ್ತು ಅಭದ್ರತೆಯ ಜೊತೆಗೆ ಯಾವಾಗಲೂ ರಾಷ್ಟ್ರದ ಭದ್ರತೆಗೆ ಅಪಾಯ ಉಂಟಾಗಿತ್ತು. ಕಾಂಗ್ರೆಸ್ ಧ್ರುವೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದು, ಇವುಗಳನ್ನು ಉತ್ತೇಜಿಸುವ ನಿರ್ಧಾರಗಳನ್ನು ತೆಗೆದುಕೊಂಡಿತ್ತು  ಎಂದು ವಾಗ್ದಾಳಿ ನಡೆಸಿದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.