2026-03-07 03:36:11

PM Modi Lashes Out At West Bengal TMC Government | ಪಶ್ಚಿಮ ಬಂಗಾಳ ಟಿಎಂಸಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ | Speed News Kannada

PM Modi Lashes Out At West Bengal TMC Government | ಪಶ್ಚಿಮ ಬಂಗಾಳ ಟಿಎಂಸಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ | Speed News Kannada

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಟಿಎಂಸಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.  ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಭಾಷಣ ಮಾಡಿದ ಅವರು ಟಿಎಂಸಿ ಸರ್ಕಾರ ಕ್ರೂರಿ ಸರ್ಕಾರವಾಗಿದೆ. ಟಿಎಂಸಿ ಸರ್ಕಾರಕ್ಕೆ ಜನರ ಅಭಿವೃದ್ಧಿ ಬೇಕಿಲ್ಲ. ಕೇವಲ ಅಧಿಕಾರ ಮಾತ್ರ ಬೇಕು ಎಂದು ಆಪಾದಿಸಿದರು. 
ಅಕ್ರಮ ವಲಸೆಗಾರರಿಂದ ಸ್ಥಳೀಯ ನೌಕರಿಗೆ ಕುತ್ತು ಬಂದಿದೆ. ಇವರು ಸ್ಥಳೀಯರ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ. ಅಕ್ರಮ ವಲಸೆಗಾರರು ಆತಂಕ ಒಡ್ಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 
ಎಲ್ಲ ದೇಶಗಳು ಅಕ್ರಮ ನಿವಾಸಿಗಳನ್ನು ಓಡಿಸುತ್ತಿವೆ. ಆದರೆ ನಮ್ಮ ದೇಶದ ಕೆಲವರು ಅವರ ಪರ ಇದ್ದಾರೆ. ಅಕ್ರಮ ನಿವಾಸಿಗಳ ಪರ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಲಯಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ನುಸುಳುಕೋರರ ಪರವಾಗಿ ವಕಾಲತ್ತು ವಹಿಸಿದ್ದಾರೆ. ಇವರನ್ನು ದೇಶದ ಯುವಕರು ಕ್ಷಮಿಸುತ್ತಾರೆಯೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.