2026-06-08 04:57:18

pm modi compromised deal with america because to save adani; rahul gandhi|ಗೌತಮ್‌ ಅದಾನಿ ವಿರುದ್ಧದ ಆರೋಪ ಕೈಬಿಡಲು ಅಮೆರಿಕದ ಜತೆ ಪ್ರಧಾನಿ ಮೋದಿ ಚೌಕಾಸಿ: ರಾಹುಲ್ ಗಾಂಧಿ ಆರೋಪ|Speed News Kannada

pm modi compromised  deal with america because to save adani; rahul gandhi|ಗೌತಮ್‌ ಅದಾನಿ ವಿರುದ್ಧದ ಆರೋಪ ಕೈಬಿಡಲು ಅಮೆರಿಕದ ಜತೆ ಪ್ರಧಾನಿ ಮೋದಿ ಚೌಕಾಸಿ: ರಾಹುಲ್ ಗಾಂಧಿ ಆರೋಪ|Speed News Kannada

ನವದೆಹಲಿ: ಖ್ಯಾತ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪ ಕೈಬಿಡಲು ಪ್ರಧಾನಿ ಮೋದಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಮೂಲಕ ಪ್ರಧಾನಿಯವರು ರಾಜಿ ಮಾಡಿಕೊಂಡು ಅದಾನಿ ನೆರವಿಗೆ ನಿಂತಿದ್ದಾರೆ ಎಂದೂ ಅವರು ಕಿಡಿ ಕಾರಿದ್ದಾರೆ.

ನಿನ್ನೆಯಷ್ಟೇ ಗೌತಮ್ ಅದಾನಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ರಾಹುಲ್‌ ಈ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು ಅಮೆರಿಕದೊಂದಿಗೆ ಮೋದಿ ವ್ಯಾಪಾರ ಒಪ್ಪಂದ ಮಾಡಿಲ್ಲ, ಬದಲಾಗಿ ಅದಾನಿ ಬಿಡುಗಡೆಗಾಗಿ ಚೌಕಾಸಿ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರೂ ಸಹ ಇದೇ ಆಪಾದನೆಯನ್ನು ಪುಷ್ಠೀಕರಿಸಿದ್ದು, ಅಮೆರಿಕಕ್ಕೆ ಲಾಭವಾಗುವ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಏಕೆ ಒಪ್ಪಿಕೊಂಡರು ಎನ್ನುವ ಗುಟ್ಟು ಈಗ ಬಹಿರಂಗವಾಗಿದೆ. ಪ್ರಧಾನಿ ಮೋದಿ ಅವರೇ ಇನ್ನೆಷ್ಟು ರಾಜಿ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಭಾರತದ ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್‌ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅಮೆರಿಕದ ಬ್ಯಾಂಕ್‌ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅದಾನಿ ಸಮೂಹದ ಅದಾನಿ ಗ್ರೀನ್‌ ಎನರ್ಜಿ ಲಿ. 2021–2024ರ ಮಧ್ಯೆ 300 ಕೋಟಿ ಡಾಲರ್‌ಗೂ (ರೂ.25 ಸಾವಿರ ಕೋಟಿ) ಹೆಚ್ಚು ಬಂಡವಾಳ ಸಂಗ್ರಹಿಸಿದೆ. ಇದರಲ್ಲಿ ಸುಮಾರು 25 ಕೋಟಿ ಡಾಲರ್‌ (ರೂ.2,100 ಕೋಟಿ) ಹಣವನ್ನು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಈ ಆರೋಪಪಟ್ಟಿಯಲ್ಲಿ ಗೌತಮ್‌ ಅದಾನಿ ಹಾಗೂ ಇತರರ ಹೆಸರು ಕೇಳಿ ಬಂದಿತ್ತು,

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.