2026-03-07 03:44:04

Plane Crashes.. | Weather Fluctuations..! |ವಿಮಾನಗಳ ಸರಣೀ ಅಪಘಾತಗಳು.. ಹವಾಮಾನ ಏರುಪೇರು..!‌ | Speed News Kannada

 Plane Crashes.. |  Weather Fluctuations..! |ವಿಮಾನಗಳ ಸರಣೀ ಅಪಘಾತಗಳು.. ಹವಾಮಾನ ಏರುಪೇರು..!‌ | Speed News Kannada

ಜಗತ್ತಿನಾದ್ಯಂತ ಭೀಕರ ವಿಮಾನ ದುರಂತ ಸಂಭವಿಸಿರುವ ಕುಕುಟಾ ಪರ್ವತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಘೋರ ಹವಾಮಾನ ಪರಿಸ್ಥಿತಿ ಏರುಪೇರು ಆಗಿರುವದರಿಂದ ವಿಮಾನ ಪತನವಾಗುತ್ತಿವೆ. ಅಲ್ಲದೆ ಈ ಪ್ರದೇಶ ಗೆರಿಲ್ಲಾ ಗುಂಪು ನ್ಯಾಷನಲ್ ಲಿಬರೇಶನ್ ಆರ್ಮಿ ನಿಯಂತ್ರಣದಲ್ಲಿ ಇದೆ. ಹೀಗಿದ್ದಾಗ ವಿಮಾನ ದುರಂತದ ನಂತರ ಮೃತದೇಹ ರಕ್ಷಣೆ ಮಾಡಿ, ಕುಟುಂಬಗಳಿಗೆ ತಲುಪಿಸುವುದು ಕಷ್ಟಕರವಾಗಿದೆ. ಹೀಗಾಗಿ ಇದೀಗ ವಿಶೇಷ ತಂಡ ರಚನೆ ಮಾಡಿರುವ ಅಲ್ಲಿನ ಸರ್ಕಾರ ಪರ್ವತ ಭಾಗದಲ್ಲಿ ಮೃತದೇಹಗಳ ಹುಡುಕಾಟಕ್ಕೆ ಎಲ್ಲಾ ರೀತಿಯ ಪ್ರಯತ್ನ ಕೂಡ ಮಾಡುತ್ತಿದೆ. ಆದರೆ ವಿಮಾನದಲ್ಲಿದ್ದ ಯಾರು ಉಳಿದುಕೊಂಡಿಲ್ಲ ಎಂಬ ವಿಚಾರವನ್ನ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಕೊಲಂಬಿಯಾ ವಿಮಾನ ದುರಂತ ಕಂಡು ಇಡೀ ದಕ್ಷಿಣ ಅಮೆರಿಕ ಬೆಚ್ಚಿಬಿದ್ದಿದೆ.

ಜಗತ್ತಿನಲ್ಲಿ ವಿಮಾನ ಸೇವೆ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತದೆ, ಏಕೆಂದರೆ ಹೀಗೆ ವಿಮಾನ ಸೇವೆಯಲ್ಲಿ ಒಂದು ಸಣ್ಣ ಎಡವಟ್ಟು ಮಾಡಿಕೊಂಡರೂ ಅದು ನೂರಾರು ಪ್ರಯಾಣಿಕರ ಜೀವದ ಜೊತೆಗೆ ಚಲ್ಲಾಟ ಆಡಿದಂತೆ. ಅದರಲ್ಲೂ ಸಣ್ಣಪುಟ್ಟ ವಿಮಾನ ಇದ್ದರೆ ಅಪಘಾತ ಆಗುವ ಸಾಧ್ಯತೆಗಳು ಹೆಚ್ಚು ಎಂಬ ವಾದ ಇತ್ತೀಚೆಗೆ ಶುರುವಾಗಿದೆ. ಏಕೆಂದರೆ ಸಾಲು ಸಾಲು ಪುಟಾಣಿ ವಿಮಾನ ಇದೀಗ ಅಪಘಾತಕ್ಕೆ ತುತ್ತಾಗಿ ಪ್ರಯಾಣಿಕರ ಜೀವ ತೆಗೆಯುತ್ತಿವೆ. ಅದೇ ರೀತಿ ಇದೀಗ ದಿಢೀರ್ ದೂರದ ಕೊಲಂಬಿಯಾ ಕೂಡ ಭೀಕರ ವಿಮಾನ ದುರಂತಕ್ಕೆ ಸಾಕ್ಷಿಯಾಗಿದೆ.

ಅಷ್ಟೇ ಅಲ್ಲ ಈ ಕಹಿ ಘಟನೆ ಬೆನ್ನಲ್ಲೇ ದೂರದ ದಕ್ಷಿಣ ಅಮೆರಿಕ ಘೋರ ದುರಂತಕ್ಕೆ ಕೂಡ ಸಾಕ್ಷಿಯಾಗಿರುವಂತದ್ದು. ವಿಮಾನ ಅಪಘಾತಕ್ಕೆ 15 ಪ್ರಯಾಣಿಕರು ಈಗ ಬಲಿಯಾಗಿದ್ದು, ದುರಂತದಲ್ಲಿ ಮೃತಪಟ್ಟವರ ಪೈಕಿ ಸಂಸದ ಕೂಡ ಸೇರಿದ್ದಾರೆ ಅಂತ ವರದಿಯಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.