2026-03-07 06:03:53

Plane carrying cash crashes | ಹಣ ಸಾಗಿಸುತ್ತಿದ್ದ ವಿಮಾನ ಪತನ 20 ಮಂದಿ ಸಾವು ನೋಟಿಗಾಗಿ ಮುಗಿಬಿದ್ದ ಜನ | Speed News Kannada

Plane carrying cash crashes | ಹಣ ಸಾಗಿಸುತ್ತಿದ್ದ ವಿಮಾನ ಪತನ 20 ಮಂದಿ ಸಾವು ನೋಟಿಗಾಗಿ ಮುಗಿಬಿದ್ದ ಜನ | Speed News Kannada

ಸುಕ್ರಾ (ಬೊಲಿವಿಯಾ): ನೋಟುಗಳನ್ನು ಸಾಗಿಸುತ್ತಿದ್ದ ಬೊಲಿವಿಯಾ ವಾಯುಪಡೆಯ ಸರಕು ಸಾಗಣೆ ವಿಮಾನವು ಎಲ್‌ ಆಲ್ಟೋ ನಗರದಲ್ಲಿ ಪತನಗೊಂಡಿದ್ದು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಈ ದುರಂತ ಸಂಭವಿಸಿದೆ ಎಂದು ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂತಾ ಕ್ರೂಜ್‌ ವಿಮಾನ ನಿಲ್ದಾಣದಿಂದ ಎಲ್‌ ಆಲ್ಟೋಗೆ ಸಾಗುತ್ತಿದ್ದ ಈ ವಿಮಾನವು, ರನ್‌ ವೇನಿಂದ ಜಾರಿ ಸಮೀಪದಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ವಿಮಾನವನ್ನು C-130 ಹರ್ಕ್ಯುಲಸ್ ಎಂದು ತಿಳಿದು ಬಂದಿದ್ದು, ರಕ್ಷಣಾ ಸಚಿವಾಲಯ, ವಿಮಾನವು ಬೊಲಿವಿಯಾದ ಸೆಂಟ್ರಲ್‌ ಬ್ಯಾಂಕ್‌ಗೆ ನೋಟುಗಳನ್ನು ಸಾಗಿಸುತ್ತಿತ್ತು ಎಂದೂ ಮಾಹಿತಿ ನೀಡಿದೆ.
ಈ ದುರಂತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಪಘಾತದ ಸ್ಥಳದಲ್ಲಿ ನೋಟುಗಳನ್ನು ಆಯ್ದುಕೊಳ್ಳಲು ಜನರು ಮುಗಿಬಿದ್ದ ದೃಶ್ಯಗಳು ವೈರಲ್‌ ಆಗಿವೆ. ಇವರನ್ನು ಪೊಲೀಸರು, ಅಶ್ರುವಾಯು ಪ್ರಯೋಗಿಸಿ ಚದುರಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.