2026-06-08 04:06:36

Pilot dies in Assam Sukhoi plane crash | ಅಸ್ಸಾಂ ಸುಖೋಯ್ ವಿಮಾನ ದುರಂತ ಮದುವೆಗೆ ವಾರ ಮುನ್ನ ಮೃತಪಟ್ಟ ಪೈಲೆಟ್ | Speed News Kannada

Pilot dies in Assam Sukhoi plane crash | ಅಸ್ಸಾಂ ಸುಖೋಯ್ ವಿಮಾನ ದುರಂತ ಮದುವೆಗೆ ವಾರ ಮುನ್ನ ಮೃತಪಟ್ಟ ಪೈಲೆಟ್ | Speed News Kannada

ಅಸ್ಸಾಂ: ಅಸ್ಸಾಂ  ರಾಜ್ಯದ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ Su-30 MKI ಯುದ್ಧವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ಈ ದುರಂತದಲ್ಲಿ ಫೈಟ್ ಲೆಫ್ಟಿನೆಂಟ್ ಪುರವೇಶ್ ದುರಾಯ್ಕರ್ ಹುತಾತ್ಮರಾಗಿದ್ದಾರೆ.
ಅವರಿಗೆ 28 ವರ್ಷ ವಯಸ್ಸಾಗಿತ್ತು. ಕಳೆದ ವರ್ಷ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಪುರವೇಶ್ ದುರಾಯ್ಕರ್ ಭಾಗಿಯಾಗಿದ್ದರು.
ಈ ವಿಷಯ ತಿಳಿದು ಅವರ ಕುಟುಂಬ ಶೋಕದಲ್ಲಿ ಮುಳುಗಿದೆ. ಗುರುಗ್ರಾಮ್‌ ನಲ್ಲಿರುವ ಸ್ಯಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರ ಮನೆಯಲ್ಲಿ ಅವರ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ವಸಿಷ್ಠ ಅವರ ತಾಯಿಗೆ ಈ ಬಗ್ಗೆ ತಿಳಿಸಿರಲಿಲ್ಲ. ಜೆಟ್ ಅಪಘಾತದಲ್ಲಿ ಅವರ ಮಗ ಗಾಯಗೊಂಡಿದ್ದಾನೆ ಎಂದು ಅವರಿಗೆ ತಿಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ನೇಹಿತರೊಬ್ಬರು ಹೇಳುವ ಪ್ರಕಾರ, ವಶಿಷ್ಠ ಹರಿಯಾಣದ ಭಿವಾನಿ ಜಿಲ್ಲೆಯವರು. ಅವರ ತಂದೆ (ನಿವೃತ್ತ) ಸುಬೇದಾರ್ ಆನಂದ್ ಪ್ರಕಾಶ್, ತಾಯಿ ಅನಿತಾ  ದೇವಿ. ಅನುಜ್ ಗುರುಗ್ರಾಮದ ಸೆಕ್ಟರ್ 14 ರಲ್ಲಿರುವ ಕೇಂದ್ರೀಯ ವಿದ್ಯಾಲಯದಿಂದ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಂತರ ಭಾರತೀಯ ವಾಯುಪಡೆಗೆ ಸೇರಿದರು.
ವಸಿಷ್ಠ ಅವರ ಕುಟುಂಬವು ಅವರ ಮದುವೆಗೆ ತಯಾರಿ ನಡೆಸುತ್ತಿತ್ತು ಮತ್ತು ಅವರ ನಿಶ್ಚಿತಾರ್ಥ ಕೂಡ ಕೆಲ ದಿನಗಳ ಹಿಂದೆನಡೆದಿತ್ತು. ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿದ್ದ ಪೈಲಟ್ ಸೇರಿ ಇಬ್ಬರು ಸಾವು ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ (Su-30MKI) ಯುದ್ಧವಿಮಾನ ನಾಪತ್ತೆಯಾಗಿತ್ತು. ರಡಾರ್‌ನಿಂದ ಕಣ್ಮರೆಯಾಗಿದ್ದ ಆ ವಿಮಾನ ಅಪಘಾತಕ್ಕೀಡಾಗಿದೆ. ಈ ವೇಳೆ ಅದರಲ್ಲಿದ್ದ ಇಬ್ಬರು ವಾಯುಪಡೆಯ ಪೈಲಟ್‌ಗಳು ಮೃತಪಟ್ಟಿದ್ದಾರೆ. ಅವರಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್ ಕೂಡ ಸೇರಿದ್ದಾರೆ. 10 ದಿನಗಳ ಹಿಂದಷ್ಟೇ ಅವರು ತಮ್ಮ ಕುಟುಂಬವನ್ನು ಭೇಟಿಯಾಗಿದ್ದರು. ಮೃತಪಟ್ಟ ಪೈಲಟ್‌ಗಳನ್ನು ಸ್ಯಾಡ್ರನ್ ಲೀಡರ್ ಅನುಜ್ ಮತ್ತು ಫೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಯ್ಕರ್ ಎಂದು ಗುರುತಿಸಲಾಗಿದೆ.
ಸುಖೋಯ್ ಯುದ್ಧವಿಮಾನದ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಸ್ಯಾಡ್ರನ್ ಲೀಡರ್ ಅನುಜ್ ಮತ್ತು ಫೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಯ್ಕರ್ ಮೃತಪಟ್ಟಿರುವ ಬಗ್ಗೆ IAF ದೃಢಪಡಿಸಿದೆ. ಈ ದುಃಖದ ಸಮಯದಲ್ಲಿ IAFನ ಎಲ್ಲಾ ಸಿಬ್ಬಂದಿ ಮೃತರ ಕುಟುಂಬದೊಂದಿಗೆ ನಿಲ್ಲುತ್ತಾರೆ ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಸುಖೋಯ್-30MKI ವಿಮಾನವು ಗುರುವಾರ ಸಂಜೆ ಜೋರ್ಹತ್ ವಾಯುನೆಲೆಯಿಂದ ಹೊರಟು ರಡಾರ್ ಸಂಪರ್ಕವನ್ನು ಕಳೆದುಕೊಂಡಿತು. ರಷ್ಯಾ ಮೂಲದ ಫೈಟರ್ ಜೆಟ್‌ನೊಂದಿಗಿನ ಸಂಪರ್ಕವು ಸಂಜೆ 7.42ರ ಸುಮಾರಿಗೆ ಕಡಿದುಹೋಗಿತ್ತು. ಐಎಎಫ್ ಶೋಧ ಕಾರ್ಯಾಚರಣೆ ವೇಳ ಜೋರ್ಹತ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.