2026-06-25 04:03:51

Photo of the killer of a Kannadigasian in Canada | ಕೆನಡಾದಲ್ಲಿ ಕನ್ನಡಿಗನ ಹ*ತ್ಯೆ ಹಂತಕನ ಫೋಟೋ ಬಿಡುಗಡೆ | Speed News Kannada

Photo of the killer of a Kannadigasian in Canada | ಕೆನಡಾದಲ್ಲಿ ಕನ್ನಡಿಗನ ಹ*ತ್ಯೆ ಹಂತಕನ ಫೋಟೋ ಬಿಡುಗಡೆ | Speed News Kannada

ನೆಲಮಂಗಲ : ಕೆನಡಾ ದೇಶದಲ್ಲಿ ಕನ್ನಡಿಗನನ್ನ ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರ ಬಿಡುಗಡೆ ಮಾಡಲಾಗಿದೆ.
ಕೆನಡಾದ ಟೊರಂಟೊದಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಕೊಲೆಯಾಗಿದ್ದರು.ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ಸಾಫ್ಟ್ರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿಕೊಂಡು ಅಲ್ಲಿನ ಕನ್ನಡಿಗರ ಸಂಘಟನೆಯ ಮೂಲಕ ಸಾಕಷ್ಟು ಹೆಸರು ಮಾಡಿದ್ದರು.
ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ವಿಚಾರದಲ್ಲಿ ಟೊರಂಟೊ ಪೊಲೀಸರು ಚಂದನ್ ಕುಮಾರ್ ಕೊಲೆಯ ಪಮಾಹಿತಿ ನೀಡಿದ್ದು ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ. ಆರೋಪಿಯನ್ನು ಇಷಯಾ ಥಾಮಸ್ ಬಡೇರ್ 19 ವರ್ಷ ವಯಸ್ಸಿನ ವ್ಯಕ್ತಿ ಕೊಲೆ ಆರೋಪಿ ಎಂದು ಗುರುತಿಸಲಾಗಿದ್ದು, ಟೊರಂಟೊ ಪೊಲೀಸರಿಂದ ವಾಂಟೆಡ್ ಲಿಸ್ಟ್ ಫೋಟೋ ರಿಲೀಸ್ ಮಾಡಿದ್ದಾರೆ. ಸದ್ಯ ಕೊಲೆ ಆರೋಪಿಯನ್ನ ಇನ್ನೂ ಹುಡುಕಾಟ ನಡೆದಿದೆ. ಸದ್ಯ ಕೊಲೆ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರತ್ಯೇಕ ತಂಡಗಳನ್ನು ರಚಿಸಿ ಹುಡುಕಾಟ ನಡೆಸಿರುವ ಟೊರಂಟೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.