2026-03-07 05:15:30

Phone tapping is rampant in Congress government | ಕಾಂಗ್ರೆಸ್‌ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ಅತಿಯಾಗಿದೆ ಕೇಂದ್ರ ಸಚಿವ ಕುಮಾರಸ್ವಾಮಿ | Speed News Kannada

Phone tapping is rampant in Congress government | ಕಾಂಗ್ರೆಸ್‌ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ಅತಿಯಾಗಿದೆ ಕೇಂದ್ರ ಸಚಿವ ಕುಮಾರಸ್ವಾಮಿ | Speed News Kannada

ಮೈಸೂರು: ರಾಜ್ಯದಲ್ಲಿ ಎಲ್ಲ ಪಕ್ಷಗಳ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಆದರೆ ಅವರದ್ದೇ ಶಾಸಕರು–ಸಚಿವರ ಮೇಲೆ ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೆಲವರು ಫೋನ್‌ ಟ್ಯಾಪಿಂಗ್ ಮಾಡಿಯೂ ಪತಿವ್ರತೆಯರಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಕದ್ದಾಲಿಕೆ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಕೆಲವೊಮ್ಮೆ ವಿಷಯಗಳು ಹೊರಗೆ ಬಂದು ಕೆಲವರ ತಲೆ ಉರುಳುತ್ತವೆ ಎಂದರು. 
ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಫೋನ್‌ ಟ್ಯಾಪಿಂಗ್ ಅಇತಾಗಿದೆ. ಅದು ಎಷ್ಟು ಜಾಸ್ತಿಯಾಗಿದೆ ಎಂದು ಆಡಳಿತ ನಡೆಸುವವರನ್ನೇ ಕೇಳಬೇಕು ಎಂದರು.
ಮುಖ್ಯಮಂತ್ರಿಯದ್ದು ಒಂದು ಗುಂಪು, ಮುಖ್ಯಮಂತ್ರಿ ಆಗಬೇಕು ಎಂದುಕೊಂಡವರದ್ದು ಮತ್ತೊಂದು ಗುಂಪಾಗಿದೆ. ಎರಡೂ ಟೀಂಗಳು ಪರಸ್ಪರ ಗೂಢಚಾರಿಕೆ ನಡೆಸುತ್ತಿರುವುದು ದುರಂತ ಎಂದರು.
ಗಲ್ಫ್ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರೂ ಸೇರಿದಂತೆ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ದುಬೈನಲ್ಲಿರುವ ಕನ್ನಡಿಗರು ಪ್ರವಾಸಿ ಕನ್ನಡಿಗರ ಸಹಾಯಕ್ಕೆ ದಾವಿಸಿದ್ದಾರೆ ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.