2026-07-23 12:24:01

Petrol-diesel prices cross the limit in Silicon City|ಸಿಲಿಕಾನ್‌ ಸಿಟಿಯಲ್ಲಿ ಗಡಿ ದಾಟಿದ ಪೆಟ್ರೋಲ್-ಡೀಸೆಲ್ ದರ|Speed News Kannada

Petrol-diesel prices cross the limit in Silicon City|ಸಿಲಿಕಾನ್‌ ಸಿಟಿಯಲ್ಲಿ ಗಡಿ ದಾಟಿದ ಪೆಟ್ರೋಲ್-ಡೀಸೆಲ್ ದರ|Speed News Kannada

ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳ ಮೇಲೆ ಬೀರಿದೆ.ವಿಶೇಷವಾಗಿ ಶೆಲ್‌ನಂತಹ ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬೆಲೆ ಗಗನಕ್ಕೇರಿದ್ದು, ಪವರ್ ಡೀಸೆಲ್ ದರ ₹133 ಹಾಗೂ ಸಾಮಾನ್ಯ ಡೀಸೆಲ್ ₹123ರ ಗಡಿ ದಾಟಿದೆ. ಪೆಟ್ರೋಲ್ ದರವೂ ₹130ರ ಆಸುಪಾಸಿನಲ್ಲಿದೆ.

ಕೇವಲ ಒಂದು ವಾರದಲ್ಲಿ ಲೀಟರ್‌ಗೆ ₹10ಕ್ಕೂ ಹೆಚ್ಚು ಏರಿಕೆಯಾಗಿದೆ. ಇದು ಸರಕು ಸಾಗಣೆ, ಸಾರ್ವಜನಿಕ ಸಾರಿಗೆ ಮತ್ತು ಮಧ್ಯಮ ವರ್ಗದ ಜನರ ಬಜೆಟ್ ಮೇಲೆ ತೀವ್ರ ಹೊಡೆತ ನೀಡಿದೆ.ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತೈಲ ಬೆಲೆ ಶೀಘ್ರದಲ್ಲೇ ₹150ರ ಗಡಿ ದಾಟಬಹುದು ಎಂಬ ಆತಂಕ ವ್ಯಕ್ತವಾಗಿದೆ. ಸರ್ಕಾರಿ ಬಂಕ್‌ಗಳಿಗೆ ಹೋಲಿಸಿದರೆ ಖಾಸಗಿ ಬಂಕ್‌ಗಳಲ್ಲಿ ದರ ಏರಿಕೆ ವೇಗವಾಗಿರುವುದು ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.