2026-06-08 01:21:28

ಪೆಟ್ರೋಲ್‌ ಡೀಸೆಲ್‌ ಬೆಲೆ ಮತ್ತೆ 90 ಪೈಸೆ ಹೆಚ್ಚಳ; ಬೆಂಗಳೂರು ದರ ಇಷ್ಟಿದೆ|Speed News Kannada

ಪೆಟ್ರೋಲ್‌ ಡೀಸೆಲ್‌ ಬೆಲೆ ಮತ್ತೆ 90 ಪೈಸೆ ಹೆಚ್ಚಳ; ಬೆಂಗಳೂರು ದರ ಇಷ್ಟಿದೆ|Speed News Kannada

ಬೆಂಗಳೂರು: ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಪ್ರತಿ ಲೀ.ಗೆ 90 ಪೈಸೆ ಹೆಚ್ಚಿಸಿವೆ. ಇದು ಒಂದು ವಾರದೊಳಗೆ 2ನೇ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ರೂ.106.17 ರಿಂದ ರೂ.107.12 ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರ ಪ್ರತಿ ಲೀಟರ್‌ ಗೆ ರೂ.97.77ನಿಂದ ರೂ. 98.64ಕ್ಕೆ ಹೆಚ್ಚಳವಾಗಿದೆ.

ಮದ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಏರಿಕೆ ಮಾಡಲಾಗಿದೆ. ಶುಕ್ರವಾರ ಪ್ರತಿ ಲೀಟರ್‌ ಗೆ 3 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಬೆಲೆ ಏರಿಕೆಯಿಂದ ತೈಲ ಕಂಪನಿಗಳ ನಷ್ಟ ಕಡಿಮೆಯಾಗಲಿದೆ ಎಂದು ಊಹಿಸಲಾಗಿದೆ. ರಾಜ್ಯಗಳು ಪ್ರತ್ಯೇಕವಾಗಿ ತೆರಿಗೆ ವಿಧಿಸುವುದರಿಂದ ಬೆಲೆ ಏರಿಕೆ ಒಂದೇ ತೆರನಾಗಿ ಇರುವುದಿಲ್ಲ.  

ಈ ದರ ಏರಿಕೆ ಸಾರ್ವಜನಿಕರಿಗೆ ಭಾರೀ ಹೊಡೆತ ನೀಡಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.