ಬೆಂಗಳೂರು: ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ 90 ಪೈಸೆ ಹೆಚ್ಚಿಸಿವೆ. ಇದು ಒಂದು ವಾರದೊಳಗೆ 2ನೇ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.106.17 ರಿಂದ ರೂ.107.12 ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.97.77ನಿಂದ ರೂ. 98.64ಕ್ಕೆ ಹೆಚ್ಚಳವಾಗಿದೆ.
ಮದ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಏರಿಕೆ ಮಾಡಲಾಗಿದೆ. ಶುಕ್ರವಾರ ಪ್ರತಿ ಲೀಟರ್ ಗೆ 3 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಬೆಲೆ ಏರಿಕೆಯಿಂದ ತೈಲ ಕಂಪನಿಗಳ ನಷ್ಟ ಕಡಿಮೆಯಾಗಲಿದೆ ಎಂದು ಊಹಿಸಲಾಗಿದೆ. ರಾಜ್ಯಗಳು ಪ್ರತ್ಯೇಕವಾಗಿ ತೆರಿಗೆ ವಿಧಿಸುವುದರಿಂದ ಬೆಲೆ ಏರಿಕೆ ಒಂದೇ ತೆರನಾಗಿ ಇರುವುದಿಲ್ಲ.
ಈ ದರ ಏರಿಕೆ ಸಾರ್ವಜನಿಕರಿಗೆ ಭಾರೀ ಹೊಡೆತ ನೀಡಿದೆ.