2026-07-23 01:37:12

People Are Flocking To Gold Shops! What Is The Gold Rate? | ಚಿನ್ನದಂಗಡಿಗೆ ಮುಗಿಬೀಳ್ತಿದ್ದಾರೆ ಜನ! ಎಷ್ಟಿದೆ ಗೋಲ್ಡ್ ರೇಟ್? | Speed News Kannada

People Are Flocking To Gold Shops! What Is The Gold Rate? | ಚಿನ್ನದಂಗಡಿಗೆ ಮುಗಿಬೀಳ್ತಿದ್ದಾರೆ ಜನ! ಎಷ್ಟಿದೆ ಗೋಲ್ಡ್ ರೇಟ್? | Speed News Kannada

ಬೆಂಗಳೂರು :  ಚಿನ್ನ-ಬೆಳ್ಳಿ ದರ ನಿಧಾನವಾಗಿ ಇಳಿಮುಖದತ್ತ ಸಾಗಿದೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ದಿಢೀರ್ ಏರಿಕೆಯಾದ್ರೆ ಬೆಲೆ ಕುಸಿತವಾಗೋದು ಗ್ಯಾರಂಟಿ ಎಂದಿದ್ದ ತಜ್ಞರ ಭವಿಷ್ಯ ಕೂಡ ನಿಜವಾಗಿದೆ. ಹಾಗಾದ್ರೆ ಎಷ್ಟು ಸಾವಿರಕ್ಕೆ ಬಂದು ನಿಲ್ಲುತ್ತೆ  ಚಿನ್ನ. ಗಗನಕ್ಕೇರಿದ್ದ ಬೆಲೆಯಲ್ಲಿ ಇದೀಗ ಭಾರೀ ಕುಸಿತ ಉಂಟಾಗಿದೆ. ಎರಡೇ ದಿನದಲ್ಲಿ ಚಿನ್ನದ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಬೆಲೆ ಇಳಿಕೆಯಿಂದ ಆಭರಣ ಪ್ರಿಯರು ದಿಲ್ ಖುಷ್ ಆಗಿದ್ದಾರೆ. ಏರಿಕೆಯಾದಷ್ಟೇ ವೇಗವಾಗಿ ಬೆಲೆ ಇಳಿಕೆ ಆಗ್ತಿದೆ. ಈ ದಿನ ಬೆಂಗಳೂರಲ್ಲಿ ಚಿನ್ನದ ಬೆಲೆ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನ ಬೆಲೆ 15,153 ರೂಪಾಯಿ ಇದೆ. 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 13,890 ಹಾಗೂ 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ 11,365 ರೂಪಾಯಿ ಇದೆ. ಬೆಳ್ಳಿ ದರದ ಬಗ್ಗೆ ನೋಡೋದಾದ್ರೆ, ಒಂದು ಕೆಜಿ ಬೆಳ್ಳಿಯ ದರ ಇಂದು 3,20,000 ರೂಪಾಯಿ ಇದೆ. ನಿನ್ನೆ 3,50,000 ಇದ್ದ ಒಂದು ಕೆಜಿ ಬೆಳ್ಳಿ‌ ದರ ಇಂದು ಕುಸಿದಿದೆ. ಚಿನ್ನದ ಬೆಲೆಯಲ್ಲಿ ಎರಡೇ ದಿನಕ್ಕೆ 20% ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಎರಡು ದಿನದಲ್ಲಿ 40% ಇಳಿಕೆ ಕಂಡಿದೆ. ಬೆಂಗಳೂರಲ್ಲಿ ಚಿನ್ನದಂಗಡಿಗೆ ಗ್ರಾಹಕರು ಮುಗಿಬೀದ್ದರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.