2026-06-25 04:03:40

Parents who opposed inter caste love marriage kidnapped their own daughter | ಅಂತರ್ಜಾತಿ ಪ್ರೇಮ ವಿವಾಹಕ್ಕೆ ವಿರೋಧ ಮಗಳನ್ನೇ ಕಿಡ್ನಾಪ್ ಮಾಡಿದ ಪೋಷಕರು | Speed News Kannada

Parents who opposed inter caste love marriage kidnapped their own daughter | ಅಂತರ್ಜಾತಿ ಪ್ರೇಮ ವಿವಾಹಕ್ಕೆ ವಿರೋಧ ಮಗಳನ್ನೇ ಕಿಡ್ನಾಪ್ ಮಾಡಿದ ಪೋಷಕರು | Speed News Kannada

ಹಾವೇರಿ : ಅಂತರ್ಜಾತಿ ಪ್ರೇಮ ವಿವಾಹದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕುಟುಂಬಗಳ ವಿರೋಧ ನಡುವೆಯೇ ಮದುವೆಯಾದ ಯುವತಿಯನ್ನು ಪೋಷಕರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾನಗಲ್‌ ತಾಲೂಕಿನ ತಿಳವಳ್ಳಿ ಗ್ರಾಮದ ಮಣಿಕಂಠಸ್ವಾಮಿ ಮತ್ತು ಕೊಪ್ಪ ಗ್ರಾಮದ ಸೃಷ್ಟಿ ಇಬ್ಬರೂ ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಜಾತಿ ಭಿನ್ನತೆಯ ಕಾರಣದಿಂದ ಇವರ ಸಂಬಂಧಕ್ಕೆ ಕುಟುಂಬಗಳಿಂದ ಒಪ್ಪಿಗೆ ಇರಲಿಲ್ಲ.
ಹೀಗಾಗಿ ಇಬ್ಬರೂ ಎರಡು ದಿನಗಳ ಹಿಂದೆ ದೇವಸ್ಥಾನದಲ್ಲಿ ಶಾಸ್ರೋಕ್ತವಾಗಿ ಸಪ್ತಪದಿ ತುಳಿದು ವಿವಾಹವಾಗಿದ್ದರು. ನಂತರ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು ಕಚೇರಿಯಿಂದ ಹೊರಟಾಗ, ಯುವತಿಯ ಕುಟುಂಬಸ್ಥರು ಅವರ ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ.
ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯ ವಿರೋಧದ ನಡುವೆಯೂ ಆಕೆಯನ್ನು ಎಳೆದೊಯ್ದರೆಂಬ ಆರೋಪ ಕೇಳಿಬಂದಿದೆ. ಪತ್ನಿಯನ್ನು ಮರಳಿ ಕಳುಹಿಸುವಂತೆ ಮಣಿಕಂಠಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಈ ಘಟನೆ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.