2026-06-08 03:56:03

Pakistani hockey players | ಆಸ್ಟ್ರೇಲಿಯಾ ಪ್ರವಾಸ ಹಣ ಇಲ್ಲದೆ ಪಾತ್ರೆ ಸಂಡಾಸು ತೊಳೆದ ಪಾಕ್‌ ಹಾಕಿ ಆಟಗಾರರು | Speed News Kannada

Pakistani hockey players | ಆಸ್ಟ್ರೇಲಿಯಾ ಪ್ರವಾಸ ಹಣ ಇಲ್ಲದೆ ಪಾತ್ರೆ ಸಂಡಾಸು ತೊಳೆದ ಪಾಕ್‌ ಹಾಕಿ ಆಟಗಾರರು | Speed News Kannada

ಲಾಹೋರ್: ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆ ಹಾಕಿ. ಆದರೆ ಹಾಕಿ ಆಟಗಾರರು ಮಾತ್ರ ಕೇರ್‌ ಆಫ್‌ ಫುಟ್‌ ಪಾತ್‌ ಆಗಿದ್ದಾರೆ.  ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಲಾಹೋರ್‌ ಗೆ ಬಂದಿಳಿದ ಹಾಕಿ ತಂಡದ ಆಟಗಾರರು ರಾಷ್ಟ್ರೀಯ ಹಾಕಿ ಫೆಡರೇಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 
ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ಮಾತನಾಡಿ, ಪಂದ್ಯ ಆಡಲು ಹೋಗುವ ಮುನ್ನ ಆಟಗಾರರು ಅಡುಗೆ ಮನೆ ಸ್ವಚ್ಛಗೊಳಿಸಿ, ಪಾತ್ರೆ ತೊಳೆದರೆ ಗೆಲ್ಲುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಉದ್ದಕ್ಕೂ ನಾವು ನೂರೆಂಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಸಿಡ್ನಿ ವಿಮಾನ ನಿಲ್ದಾಣ ತಲುಪಿದಾಗ ಸುಮಾರು 13-14 ಗಂಟೆ ಕಾಲ ನಿಲ್ದಾಣದಲ್ಲೇ ಇರಬೇಕಾಯಿತು. ನಂತರ ಕ್ಯಾನ್‌ಬೆರಾ ತಲುಪಿದಾಗ ಹೋಟೆಲ್ ಬಿಲ್ ಪಾವತಿಸದ ಕಾರಣ ರೂಂ ಸಿಗಲಿಲ್ಲ. ಇದರಿಂದ ನಾವೆಲ್ಲಾ ಲಗೇಜ್‌ ಜತೆ ರಸ್ತೆಯಲ್ಲೇ ಅಲೆದಾಡಬೇಕಾಯಿತು ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೋಟೆಲ್ ಇಲ್ಲದ ಕಾರಣ ಆಟಗಾರರಿಗೆ 13 ದಿನಗಳ ಪ್ರವಾಸಕ್ಕೆ ಕೇವಲ 10 ದಿನಗಳ ಮಟ್ಟಿಗೆ Airbnb ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಆಟಗಾರರೇ ಸ್ವತಃ ಅಡುಗೆ ಮಾಡಿಕೊಳ್ಳಬೇಕಿತ್ತು. ವುದು, ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ಪಾತ್ರೆ ತೊಳೆಯುವ ಕೆಲಸಗಳನ್ನು ಮಾಡಬೇಕಾಯಿತು ಎಂದಿದ್ದಾರೆ.
ಪಾಕಿಸ್ತಾನ ಕ್ರೀಡಾ ಮಂಡಳಿ ಆಟಗಾರರ ವೆಚ್ಚಕ್ಕಾಗಿ ಸುಮಾರು 1 ಕೋಟಿ ರೂಪಾಯಿ  ಹಣವನ್ನು ಮೊದಲೇ ಬಿಡುಗಡೆ ಮಾಡಿತ್ತು. ಆದರೆ ಈ ಹಣ ಎಲ್ಲಿಗೆ ಹೋಯಿತು ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.
 ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಜರ್ಮನಿ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.