2026-03-07 01:31:43

Pakistan team | ಹೀಗಾದ್ರೆ ಪಾಕಿಸ್ತಾನ್ ತಂಡ ವಿಶ್ವಕಪ್ ನಿಂದಲೇ ಔಟ್ | Speed News Kannada

Pakistan team | ಹೀಗಾದ್ರೆ ಪಾಕಿಸ್ತಾನ್ ತಂಡ ವಿಶ್ವಕಪ್ ನಿಂದಲೇ ಔಟ್ | Speed News Kannada

T20 World Cup 2026: ಟಿ20 ವಿಶ್ವಕಪ್ ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿ ಮುಂದಿನ ಹಂತಕ್ಕೇರಿದೆ. ಅತ್ತ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಸೋಲುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.ಹೀಗಾಗಿ ಪಾಕ್ ಪಾಲಿಗೆ ಮುಂದಿನ ಮ್ಯಾಚ್ ನಿರ್ಣಾಯಕ. ಪ್ರಸ್ತುತ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ತಂಡವು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಯುಎಸ್‌ಎ 4 ಮ್ಯಾಚ್‌ಗಳಲ್ಲಿ 2 ಜಯ ಸಾಧಿಸಿರುವ ಯುಎಸ್ಎ ತಂಡ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಅತ್ತ ಪಾಕಿಸ್ತಾನ್ ತಂಡವು ಮೂರು ಪಂದ್ಯಗಳನ್ನಾಡಿದ್ದು, ಈ ವೇಳೆ ಯುಎಸ್‌ಎ ಹಾಗೂ ನೆದರ್‌ಲೆಂಡ್ಸ್ ವಿರುದ್ಧ ವಿಜಯ ಸಾಧಿಸಿದೆ.
ಇದೀಗ 4 ಅಂಕಗಳನ್ನು ಹೊಂದಿರುವ ಪಾಕಿಸ್ತಾನ್ ತಂಡಕ್ಕೆ ಇನ್ನೊಂದು ಮ್ಯಾಚ್ ಮಾತ್ರ ಬಾಕಿಯಿದೆ. ಅದು ಕೂಡ ನಮೀಬಿಯ ವಿರುದ್ಧ. ಈ ಪಂದ್ಯದಲ್ಲಿ ಪಾಕ್ ತಂಡ ಗೆಲ್ಲದೇ ಇದ್ದರೆ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವುದು ಖಚಿತ. ಏಕೆಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿರುವ ಯುಎಸ್ಎ ತಂಡವು +0.787 ನೆಟ್ ರನ್ ರೇಟ್ ಹೊಂದಿದೆ. ಆದರೆ ಪಾಕಿಸ್ತಾನ್ ತಂಡವು 4 ಅಂಕಗಳನ್ನು ಪಡೆದಿದ್ದರೂ -0.403 ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ನಮೀಬಿಯ ವಿರುದ್ಧದ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ.

ಪಾಕಿಸ್ತಾನ್ ತಂಡದ ಸೂಪರ್-8 ಸಮೀಕರಣ:
ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಗೆದ್ದರೆ ಸೂಪರ್-8 ಹಂತಕ್ಕೇರಲಿದೆ. ಇಲ್ಲಿ ಯಾವುದೇ ನೆಟ್ ರನ್ ರೇಟ್ ಲೆಕ್ಕಾಚರ ಬರುವುದಿಲ್ಲ.
ಪಾಕಿಸ್ತಾನ್ ಮತ್ತು ನಮೀಬಿಯ ನಡುವಣ ಪಂದ್ಯವು ಯಾವುದಾದರೂ ಕಾರಣದಿಂದ ರದ್ದಾದರೂ ಪಾಕ್ ತಂಡ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಈ ಮೂಲಕ 5 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಪಾಕಿಸ್ತಾನ್ ಸೂಪರ್-8 ಹಂತಕ್ಕೇರಬಹುದು.
ಒಂದು ವೇಳೆ ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಸೋತರೆ, ಯುಎಸ್ಎ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ. ಏಕೆಂದರೆ ಇಲ್ಲಿ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಅಂದರೆ ಉಭಯ ತಂಡಗಳು ತಲಾ 4 ಅಂಕಗಳನ್ನು ಪಡೆದಿರುವ ಕಾರಣ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಸೂಪರ್-8 ಹಂತಕ್ಕೇರಲಿದೆ. ಅದರಂತೆ ಪಾಕಿಸ್ತಾನಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುವ ಯುಎಸ್ಎ ತಂಡಕ್ಕೆ ಮುಂದಿನ ಸುತ್ತಿಗೆ ಪ್ರವೇಶಿಸಲು ಅವಕಾಶ ಸಿಗಲಿದೆ.
ಅಂದರೆ ಫೆಬ್ರವರಿ 18 ರಂದು ನಡೆಯಲಿರುವ ನಮೀಬಿಯ ವಿರುದ್ಧದ ಪಂದ್ಯವು ಪಾಕಿಸ್ತಾನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಮ್ಯಾಚ್‌ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ಸೂಪರ್-8 ಹಂತಕ್ಕೇರಲಿದೆ. ಒಂದು ವೇಳೆ ಸೋತರೆ ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ಹೊರಬೀಳಲಿದೆ. ಹೀಗಾಗಿ ಬುಧವಾರ ನಡೆಯಲಿರುವ ಪಂದ್ಯವು ಪಾಕ್ ಪಾಲಿಗೆ ಅಗ್ನಿಪರೀಕ್ಷೆ ಎಂದರೆ ತಪ್ಪಾಗಲಾರದು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.