ಪಶ್ಚಿಮ ಏಷ್ಯಾ ಯುದ್ಧಗಳು ತಾರಕ್ಕಕೇರಿದ್ದು, ಇದರ ನಡುವೆ ಅಮೆರಿಕ – ಇರಾನ್ ನಡುವೆ ಸಂದಾನ ಕಾರ್ಯವನ್ನು ಮಾಡಿಕೊಳ್ಳುಲು ಮಾತುಕತೆ ನಡೆಸುತ್ತಿತ್ತು. ಇದಕ್ಕೆ ಕ್ಯಾರೇ ಅನ್ನದ ಇರಾನ್ ಇದೀಗ ಈ ಸಂದಾನಕ್ಕೆ ಮಧ್ಯೆಸ್ಥಿಕೆವಹಿಸಿ ಪಾಕಿಸ್ತಾನ ನರಿ ಬುದ್ದಿ ತೋರಿಸಿದೆ. ಇದಕ್ಕೆ ಇರಾನ್ ಈಗ ಅನಿರೀಕ್ಷಿತ ದಾಳ ಉರುಳಿಸಿದೆ. ಇನ್ನೂ ಇರಾನ್ ಅಮೆರಿಕದ ಲೆಕ್ಕಾಚಾರಗಳು ತಲೆಕೆಳಗೆ ಮಾಡಿದೆ. ಇನ್ನೂ ಸಂದಾನದಲ್ಲಿ ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನಕ್ಕೆ ಈಗ ಇರಾನ್ ಮುಖಭಂಗ ಮಾಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ನಡುವಿನ ಕದನ ವಿರಾಮ ಸಂಧಾನದ ಮಧ್ಯೆ ಈಗ ಹೊಸ ತೀರುವು ಸಿಕ್ಕಿದೆ. ಕದನ ವಿರಾಮದ ಸಂಧಾನದಲ್ಲಿ ಯಾರ ಕೈವಾಡವಿದೆ ಎಂಬುದು ಭಾರೀ ಕುತೂಹಲ ಮೂಡಿಸಿತ್ತು. ಎರಡು ದೇಶಗಳ ಸಮರಕ್ಕೆ ಬ್ರೇಕ್ ಹಾಕಲು ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಮಧ್ಯಸ್ಥಿಕೆ ವಹಿಸಿತ್ತು ಎನ್ನಲಾಗಿದೆ. ಈ ಮಧ್ಯಸ್ಥಿಕೆಯಲ್ಲೂ ಪಾಕ್ ನರಿ ಬುದ್ಧಿ ತೋರಿಸಿದೆ. ಇದಕ್ಕೆ ಇರಾನ್ ಸ್ಪಷ್ಟವಾಗಿ “ಯಾವುದೇ ದಲ್ಲಾಳಿತನವನ್ನು ಒಪ್ಪುವುದಿಲ್ಲ” ಎಂದು ಹೇಳಿದ್ದು, ಪಾಕ್‌ಗೆ ತೀರುಗೇಟು ನೀಡಿದೆ. ಈ ಹೊತ್ತಲ್ಲೇ ಪಾಕ್‌ನ ಮುಖವಾಡ ಕಳಚಿ ಬಿದ್ದಿದೆ.
ಹಾರ್ಮುಜ್ ಜಲಸಂಧಿಯನ್ನು ಸದಾ ಮುಕ್ತವಾಗಿಡಬೇಕು, ಕ್ಷಿಪಣಿ ನಿಯಂಯ್ರಣದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಇರಬೇಕು ಮತ್ತು ಅಂತರರಾಷ್ಟ್ರೀಯ ಮೇಲ್ವಿಚಾರಣೆಗೆ ಸಂಪೂರ್ಣ ಅವಕಾಶ ನೀಡಬೇಕು. ಇನ್ನೂ ಈ ಷರತ್ತುಗಳನ್ನು ಒಪ್ಪಿದರೆ ಮಾತ್ರ ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಅಮೆರಿಕ ಸೂಚಿಸಿತ್ತು. ಆದರೆ ಇರಾನ್ ಈ ಎಲ್ಲಾ ಷರತ್ತುಗಳನ್ನು ನಿರಾಕರಿಸಿ ಅಮೆರಿಕಕ್ಕೆ ತೀರುಗೇಟು ನೀಡಿತ್ತು. ತನ್ನ ಪ್ರಭುತ್ವಕ್ಕೆ ಧಕ್ಕೆ ತರುವ ಯಾವುದೇ ಒಪ್ಪಂದವನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ಟೆಹ್ರಾನ್ ನೀಡಿತ್ತು. ಇನ್ನೂ ಇದೆಲ್ಲಾದರ ನಡುವೆ ಪಾಕಿಸ್ತಾನ ನರಿ ಬುದ್ಧಿ ತೋರಿಸಿದೆ ಎಂದು ಹೇಳಲಾಗಿದೆ.
ಯುದ್ದದಲ್ಲಿ ಸಾಂತಿ ಮಾತುಕತೆ ನಡುವೆ ಪಾಕ್ ಮಧ್ಯಸ್ಥಿಕೆ ವಹಿಸಿದ್ದು, ಇದಕ್ಕೆ ಇರಾನ್ ಎಚ್ಚರಿಕೆ ನೀಡಿದೆ. ಇನ್ನೂ ಇದರ ಬಗ್ಗೆ ಪಾಕಿಸ್ತಾನ್ ಅಮೆರಿಕದ ಪರವಾಗಿದೆ ಎಂಬುವ ಶಂಕೆ ಮೂಡಿಬರ್ತಿದೆ. ಸಂದಾನದಲ್ಲಿ ಪಾಕ್ ಕುತಂತ್ರ ಬುದ್ಧಿಯನ್ನು ತೋರಿಸಿದೆ. ಇನ್ನೂ ಈ ನಡುವೆ ಮಧ್ಯಪ್ರಾಚ್ಯದ ಯುದ್ಧವು ತೀವ್ರ ಮಟ್ಟಕ್ಕೆ ಹೋಗುವ ಅನುಮಾನಗಳು ಇದರಿಂದ ಮೂಡಿಬರ್ತಿದೆ. ಇದಕ್ಕೆ ಪಾಕ್ ಅಮೆರಿಕದ ಪರ ನಿಂತಿರುವ ಅನುಮಾನ ಮೂಡಿಬಂದಿದೆ.