2026-06-08 01:39:58

Our Metro Fares Set To Increase By 5% | ನಮ್ಮ ಮೆಟ್ರೋ ಪ್ರಯಾಣ ದರ ಶೇ. 5ರಷ್ಟು ಏರಿಕೆಗೆ ಅಸ್ತು: ಫೆಬ್ರವರಿ 9 ರಿಂದ ಜಾರಿ | Speed News Kannada

Our Metro Fares Set To Increase By 5% | ನಮ್ಮ ಮೆಟ್ರೋ ಪ್ರಯಾಣ ದರ ಶೇ. 5ರಷ್ಟು ಏರಿಕೆಗೆ ಅಸ್ತು: ಫೆಬ್ರವರಿ 9 ರಿಂದ ಜಾರಿ | Speed News Kannada

ಬೆಂಗಳೂರು: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮೂರು ದಿನಗಳ ಹಿಂದೆಯಷ್ಟೇ  ನಡೆದ ಸಬೆಯಲ್ಲಿ ಶೇ. 5ರಷ್ಟು ಮೆಟ್ರೋ ದರ ಏರಿಕೆಗೆ ಒಪ್ಪಿಗೆ ನೀಡಲಾಗಿತ್ತು. ನಂತರ ಬಿಎಂಆರ್‌ ಸಿಎಲ್‌ ಸಲ್ಲಿಸಿದ್ದ ಪ್ರಸ್ತಾವನೆಗೆ ಇಂದು) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.  
ಇದರ ಪರಿಣಾಮ ಫೆಬ್ರವರಿ 9 ರಿಂದ ಶೇ. 5ರಷ್ಟು ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಲಿದ್ದು, ಪ್ರಯಾಣಿಕರ ಕೈ ಸುಡಲಿದೆ. ಯಾವುದೇ ಕ್ಷಣದಲ್ಲಿ ಬಿಎಂಆರ್ಸಿಎಲ್ ಅಧಿಕೃತ ಆದೇಶ ಹೊರಡಿಸಲಿದೆ.
2025ರಲ್ಲಿ ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಗೊಂದಲ ಉಂಟಾಗಿತ್ತು. ಪ್ರಯಾಣ ದರ ಏರಿಕೆ ಸಂಬಂಧ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದ್ದವು. 
ಪ್ರಯಾಣ ದರದ ವಿವರ ಹೀಗಿದೆ:
ಮೆಜೆಸ್ಟಿಕ್ ನಿಂದ ವೈಟ್ಫೀಲ್ಡ್ಗೆ ಪ್ರಸ್ತುತ 80 ರೂ. ಇದ್ದು, 84ರೂ. ಗೆ ಏರಿಕೆ ಆಗಲಿದೆ. 10 ರೂ. 11 ರೂ,  90 ರೂ. ಇರುವ ಟಿಕೆಟ್ ದರ 95 ರೂ. ಆಗಲಿದೆ. ಮೆಜೆಸ್ಟಿಕ್ನಿಂದ ಬೊಮ್ಮಸಂದ್ರಕ್ಕೆ 80 ರೂ.ನಿಂದ 84 ರೂ.ಗೆ ಹೆಚ್ಚಳವಾದರೆ ಮೆಜೆಸ್ಟಿಕ್ನಿಂದ ಚಲ್ಲಘಟ್ಟಕ್ಕೆ 60 ರೂನಿಂದ 63 ರೂ.ಗೆ ಏರಿಕೆ ಆಗಲಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಟಿಕೆಟ್ ದರವನ್ನು ಶೇ.101.5ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಎಂಆರ್ಸಿಎಲ್, ಶೇ. 71.5ಕ್ಕೆ ದರ ಇಳಿಕೆ ಮಾಡಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.