2026-03-07 05:55:56

Operation by North Division Police | ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ 75 ಪ್ರಕರಣಗಳಲ್ಲಿ 83 ಆರೋಪಿಗಳ ಸೆರೆ | Speed News Kannada

Operation by North Division Police | ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ 75 ಪ್ರಕರಣಗಳಲ್ಲಿ 83 ಆರೋಪಿಗಳ ಸೆರೆ | Speed News Kannada

ಬೆಂಗಳೂರು, ಫೆ.13-ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ವಾಹನ ಕಳವು ಸೇರಿದಂತೆ 75 ಪ್ರಕರಣಗಳನ್ನು ಭೇದಿಸಿ 83 ಆರೋಪಿಗಳನ್ನು ಬಂಧಿಸಿ 1.76 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ, ಬೆಳ್ಳಿ ವಸ್ತುಗಳು ಹಾಗೂ 67 ಮೊಬೈಲ್‌ಗಳು, 3 ಲಕ್ಷ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರಿನ ಜಿಬಿಎ ಆಟದ ಮೈದಾನದಲ್ಲಿ ಇಂದು ಹಮಿಕೊಂಡಿದ್ದ ಸ್ವತ್ತುಗಳ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾಲುಗಳ ಕೆಲವು ವಾರಸುದಾರರಿಗೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಅವುಗಳನ್ನು ಹಸ್ತಾಂತರಿಸಿದರು. ಮಲ್ಲೇಶ್ವರಂ ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ 20.12 ಲಕ್ಷ ರೂ. ಮೌಲ್ಯದ 193.39 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಶ್ರೀರಾಮಪುರ ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 13.30 ಲಕ್ಷ ರೂ. ಮೌಲ್ಯದ 138 ಗ್ರಾಂ ಚಿನ್ನಾಭರಣ, 394 ಗ್ರಾಂ ಬೆಳ್ಳಿ ವಸ್ತುಗಳು, 6 ಮೊಬೈಲ್‌ಗಳು ಹಾಗೂ 1 ಟಿವಿಯನ್ನು ಜಪ್ತಿ ಮಾಡಿದ್ದಾರೆ.
ರಾಜಾಜಿನಗರ ಠಾಣೆ ಪೊಲೀಸರು 14 ಪ್ರಕರಣಗಳಲ್ಲಿ 12 ಮಂದಿ ಆರೋಪಿಗಳನ್ನು ಬಂಧಿಸಿ 50.12 ಲಕ್ಷ ರೂ. ಮೌಲ್ಯದ 392.39 ಗ್ರಾಂ ಚಿನ್ನಾಭರಣ, 9 ದ್ವಿಚಕ್ರ ವಾಹನಗಳು, 1 ನಾಲ್ಕು ಚಕ್ರದ ವಾಹನ, 4 ಮೊಬೈಲ್‌ಗಳು ಹಾಗೂ 1 ವಾಟರ್ ಮೋಟಾರ್ ವಶಪಡಿಸಿಕೊಂಡಿದ್ದಾರೆ. ಸುಬ್ರಹಣ್ಯನಗರ ಠಾಣೆ ಪೊಲೀಸರು 1 ಪ್ರಕರಣದಲ್ಲಿ ಒಬ್ಬಾತನನ್ನು ಬಂಧಿಸಿ 20 ಸಾವಿರ ಬೆಲೆಯ ದ್ವಿಚಕ್ರ ವಾಹನ ವಶಪಡಿಸಿಕೊಂಡರೇ, ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು 9 ಪ್ರಕರಣಗಳಲ್ಲಿ 5 ಮಂದಿಯನ್ನು ಬಂಧಿಸಿ 1.5 ಲಕ್ಷ ನಗದು, 17 ಗ್ರಾಂ ಚಿನ್ನಾಭರಣ, 10 ದ್ವಿಚಕ್ರ ವಾಹನಗಳು ಹಾಗೂ 1 ಮೊಬೈಲ್‌ನನ್ನು ವಶಪಡಿಸಿಕೊಂಡಿದ್ದಾರೆ.
ನಂದಿನಿಲೇಔಟ್ ಠಾಣೆ ಪೊಲೀಸರು 1 ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿ 14.50 ಲಕ್ಷ ರೂ. ಬೆಲೆಯ 100 ಗ್ರಾಂ ಚಿನ್ನಾಭರಣ ಹಾಗೂ 800 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಯಶವಂತಪುರ ಠಾಣೆ ಪೊಲೀಸರು 4 ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 5.59 ಲಕ್ಷ ರೂ. ಮೌಲ್ಯದ 24 ಗ್ರಾಂ ಚಿನ್ನಾಭರಣ, 130 ಗ್ರಾಂ ಬೆಳ್ಳಿ ವಸ್ತುಗಳು, 4.58 ಗ್ರಾಂ ವಜ್ರದ ಆಭರಣ ಹಾಗೂ 2 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.ಆರ್‌ಎಂಸಿಯಾರ್ಡ್ ಠಾಣೆ ಪೊಲೀಸರು 8 ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಿ 26.63 ಲಕ್ಷ ರೂ. ಬೆಲೆಯ 50ಗ್ರಾಂ ಚಿನ್ನಾಭರಣ, 8 ದ್ವಿಚಕ್ರ ವಾಹನ, 51 ಮೊಬೈಲ್‌ಗಳು ಹಾಗೂ ಒಂದು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ.
ಜಾಲಹಳ್ಳಿ ಠಾಣೆ ಪೊಲೀಸರು 2 ಪ್ರಕರಣಗಳಲ್ಲಿ ಒಬ್ಬಾತನನ್ನು ಬಂಧಿಸಿ 40 ಲಕ್ಷ ಮೌಲ್ಯದ 419 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡರೆ, ಜೆಸಿನಗರ ಠಾಣೆ ಪೊಲೀಸರು 4 ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 16.50 ಲಕ್ಷ ರೂ. ಮೌಲ್ಯದ 134 ಗ್ರಾಂ ಚಿನ್ನಾಭರಣ, 400 ಗ್ರಾಂ ಬೆಳ್ಳಿವಸ್ತುಗಳು, 6 ದ್ವಿಚಕ್ರ ವಾಹನಗಳು ಹಾಗೂ 1.5 ಲಕ್ಷ ಹಣ ಜಪ್ತಿ ಮಾಡಿದ್ದಾರೆ. ಆರ್‌ಟಿನಗರ ಠಾಣೆ ಪೊಲೀಸರು 8 ಪ್ರಕರಣಗಳಲ್ಲಿ 6 ಮಂದಿಯನ್ನು ಬಂಧಿಸಿ 10.46 ಲಕ್ಷ ರೂ. ಮೌಲ್ಯದ 92.6 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳು ಹಾಗೂ ಸಂಜಯನಗರ ಠಾಣೆ ಪೊಲೀಸರು 8 ಪ್ರಕರಣಗಳಲ್ಲಿ 5 ಮಂದಿಯನ್ನು ಬಂಧಿಸಿ 25.56 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣ, 6 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳ ಠಾಣೆ ಪೊಲೀಸರು 18 ಪ್ರಕರಣಗಳಲ್ಲಿ 18 ಮಂದಿಯನ್ನು ಬಂಧಿಸಿ 17.56 ಲಕ್ಷ ರೂ. ಮೌಲ್ಯದ 87.66 ಗ್ರಾಂ ಚಿನ್ನಾಭರಣ, 59 ಗ್ರಾಂ ಬೆಳ್ಳಿ ವಸ್ತುಗಳು, 9 ದ್ವಿಚಕ್ರ ವಾಹನಗಳು, 2 ತ್ರಿಚಕ್ರ ವಾಹನಗಳು ಮತ್ತು 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಫೆ.13-ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ವಾಹನ ಕಳವು ಸೇರಿದಂತೆ 75 ಪ್ರಕರಣಗಳನ್ನು ಭೇದಿಸಿ 83 ಆರೋಪಿಗಳನ್ನು ಬಂಧಿಸಿ 1.76 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ, ಬೆಳ್ಳಿ ವಸ್ತುಗಳು ಹಾಗೂ 67 ಮೊಬೈಲ್‌ಗಳು, 3 ಲಕ್ಷ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.