2026-06-08 01:25:48

Now India Will Only Buy Oil From The US | ಭಾರತ ಇನ್ನು ಮುಂದೆ ಅಮೆರಿಕದಿಂದ ಮಾತ್ರ ತೈಲ ಖರೀದಿಸಲಿದೆ: ಶ್ವೇತಭವನ ಸ್ಪಷ್ಟನೆ | Speed News Kannada

Now India Will Only Buy Oil From The US | ಭಾರತ ಇನ್ನು ಮುಂದೆ ಅಮೆರಿಕದಿಂದ ಮಾತ್ರ ತೈಲ ಖರೀದಿಸಲಿದೆ: ಶ್ವೇತಭವನ ಸ್ಪಷ್ಟನೆ | Speed News Kannada

ವಾಷಿಂಗ್ಟನ್:‌ ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ಮಾಡುವುದಿಲ್ಲ ಎಂದು ಅಮೆರಿಕ ತಿಳಿಸಿದೆ. ಅಲ್ಲದೆ ಅಮೆರಿಕದಲ್ಲಿ ಸುಮಾರು 500 ಕೋಟಿ ಡಾಲರ್‌ ಹೂಡಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದ್ದಾರೆ ಎಂದೂ ಸ್ಪಷ್ಟಪಡಿಸಿದೆ. 
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ್ದಾರೆ. 
ಭಾರತ ದೇಶದೊಂದಿಗಿನ ವ್ಯಾಪಾರ ಒಪ್ಪಂದವನ್ನು ಅಮೆರಿಕ ಸ್ವಾಗತಿಸುತ್ತದೆ. ನಮ್ಮ ಅಧ್ಯಕ್ಷ ಟ್ರಂಪ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಉಭಯ ದೇಶಗಳು ಉತ್ತಮ ವ್ಯಾಪಾರ ಸಂಬಂಧ ಕುರಿತು  ಚರ್ಚೆ ನಡೆಸಿದ್ದಾರೆ. ಇನ್ನು ಮುಂದೆ ಭಾರತ ದೇಶವು ರಷ್ಯಾ, ವೆನುಜುವೆಲಾದಿಂದ ತೈಲವನ್ನು ಖರೀದಿಸುವುದಿಲ್ಲ. ಬದಲಿಗೆ ಅಮೆರಿಕದಿಂದ ತೈಲವನ್ನು ಖರೀದಿಸಲು ಬದ್ಧವಾಗಿರುತ್ತದೆ. ಇದರಿಂದ ಅಮೆರಿಕ ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಧಾನಿ ಮೋದಿ ಅವರು  ಅಮೆರಿಕದ ಸಾರಿಗೆ, ಇಂಧನ ಮತ್ತು ಕೃಷಿ ಉತ್ಪನ್ನ ಸೇರಿದಂತೆ  ಪ್ರಮುಖ ವಲಯಗಳಲ್ಲಿ ಸುಮಾರು ರೂ. 4,521 ಕೋಟಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.