2026-06-08 01:30:13

not Danish, you making jokes like a nag|ದಾನಿಶ್ ಆಗಲ್ಲ, ನ್ಯಾಗ್ಸ್ ಆಗಿ ಜೋಕ್ ಮಾಡ್ತೀನಿ|Speed News Kannada

not Danish, you making jokes like a nag|ದಾನಿಶ್ ಆಗಲ್ಲ, ನ್ಯಾಗ್ಸ್ ಆಗಿ ಜೋಕ್ ಮಾಡ್ತೀನಿ|Speed News Kannada

ನಟ, ಸ್ಟ್ಯಾಂಡಪ್ ಕಾಮಿಡಿಯನ್ ದಾನಿಶ್ ಸೇಠ್ ಅವರ ಪರಿಚಯ ಅನೇಕರಿಗೆ ಇದೆ. ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರ ಮಾಡಿ ಗಮನ ಸೆಳೆದ ಅವರು, ನಂತರ ‘ಫ್ರೆಂಚ್ ಬಿರಿಯಾನಿ’ ರೀತಿಯ ಚಿತ್ರಗಳನ್ನು ಮಾಡಿದರು. ಇದರ ಜೊತೆ ಅವರು ‘ಮಿಸ್ಟರ್ ನ್ಯಾಗ್ಸ್’ ಆಗಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರ್ಸಿಬಿ ಇನ್ಸೈಡರ್ ಆಗಿ ಕಾಂಟೆಂಟ್ಗಳನ್ನು ಕ್ರಿಯೇಟ್ ಮಾಡುತ್ತಾರೆ. ಮಿಸ್ಟರ್ ನ್ಯಾಗ್ಸ್ ಆಗಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ದಾನಿಶ್ ಅವರು ಪ್ರತಿ ಪಂದ್ಯದ ಬಳಿಕ ಒಂದು ವಿಶೇಷ ವಿಡಿಯೋ ಮಾಡುತ್ತಾರೆ. ಇದಕ್ಕೆ ಸಿದ್ಧತೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ. ‘ನಾನು ಇದನ್ನು ಮಾಡಲು ಆರಂಭಿಸಿ 13 ವರ್ಷಗಳೇ ಆಗಿವೆ. ಸ್ಕ್ರಿಪ್ಟ್ ಬರೆಯೋದು ಸ್ವಲ್ಪ ಚಾಲೆಂಜ್ ಎನಿಸುತ್ತದೆ. ಜೋಕ್ ಸರಿಯಾಗಿ ಜನರಿಗೆ ರೀಚ್ ಆಗಬೇಕು. ಅಂದಾಗ ಮಾತ್ರ ನಮ್ಮ ಪ್ರಯತ್ನ ಯಶಸ್ಸು ಕಾಣುತ್ತದೆ. ನಾನು ವಿಗ್ ಹಾಗೂ ಮೀಸೆ ಹಾಕಿದಾಗ ನ್ಯಾಗ್ಸ್ ಆಗಿ ಬದಲಾಗಿಬಿಡುತ್ತೇನೆ. ನನ್ನದೇ ಟೀಂ ಇದೆ. ಮ್ಯಾಚ್ ನೋಡಿ ಪಾಯಿಂಟ್ಸ್ ಮಾಡ್ಕೋತೀವಿ.

ನಾನು ಈ ಪ್ರಕ್ರಿಯೆಯನ್ನು ತುಂಬಾನೇ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ದಾನಿಶ್. ಪ್ರತಿ ಐಪಿಎಲ್ ಫ್ರಾಂಚೈಸಿಗಳು ಸೋಶಿಯಲ್ ಮೀಡಿಯಾ ಹೊಂದಿದ್ದಾರೆ. ಭಿನ್ನ ಕಂಟೆಂಟ್ಗಳನ್ನು ನೀಡುತ್ತಾರೆ. ಇವುಗಳಿಗೆ ಹೋಲಿಕೆ ಮಾಡಿದರೆ ಆರ್ಸಿಬಿ ಒಂದು ಹಂತ ಮೇಲಿದೆ ಎನಿಸುತ್ತದೆ. ಆದರೆ, ಇದನ್ನು ದಾನಿಶ್ ಒಪ್ಪೋದಿಲ್ಲ. ‘ನಾವು ಫ್ಯಾನ್ ಎಂಗೇಜ್ಮೆಂಟ್ಗೋಸ್ಕರ್ ಮಾಡೋದು. ತಂಡದ ಜೊತೆಗೆ ಹಾಗೂ ಅಭಿಮಾನಿಗಳ ನಡುವೆ ನಾವು ಸೇತುವೆ ಆಗುತ್ತೇವೆ ಅಷ್ಟೇ. ಇದು ದೊಡ್ಡ ಜವಾಬ್ದಾರಿ. ಯಾರಿಗೂ ನೋವು ಮಾಡುವ ಉದ್ದೇಶ ಇಲ್ಲ. ನಾನು ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತೇನೆ. ಆ ಜ್ಞಾನವನ್ನು ವಿಡಿಯೋಗಳನ್ನು ಬೆರೆಸುತ್ತೇನೆ ಎಂದ ದಾನಿಶ್.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.