2026-06-08 02:19:34

Not Chris Brown but Kiss Brown|ಕ್ರಿಸ್ ಬ್ರೌನ್ ಅಲ್ಲ ಕಿಸ್ ಬ್ರೌನ್|Speed News Kannada

Not Chris Brown but Kiss Brown|ಕ್ರಿಸ್ ಬ್ರೌನ್ ಅಲ್ಲ ಕಿಸ್ ಬ್ರೌನ್|Speed News Kannada

ಕ್ರಿಸ್ ಬ್ರೌನ್ ಅವರ ವೈರಲ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಲ್ಲಿ ಗಾಯಕ ಲೈವ್ ಶೋ ಸಮಯದಲ್ಲಿ ಅಭಿಮಾನಿಯೊಂದಿಗೆ ವೇದಿಕೆಯಲ್ಲಿ ಲಿಪ್ಲಾಕ್ ಮಾಡುವುದನ್ನು ತೋರಿಸಲಾಗಿದೆ. ಕ್ಲಿಪ್‌ನಲ್ಲಿ, ಬ್ರೌನ್ ಪ್ರೇಕ್ಷಕರ ಗುಂಪಲಿದ್ದ ಒಬ್ಬ ಮಹಿಳೆಯನ್ನು ವೇದಿಕೆಗೆ ಆಹ್ವಾನಿಸಿ ಅವರೊಂದಿಗೆ ಮಾತನಾಡುತ್ತಾರೆ. ಕೊನೆಗೆ ಲಿಪ್ಲಾಕ್ ಮಾಡುತ್ತಾರೆ. ಇದು ಆನ್‌ಲೈನ್‌ನಲ್ಲಿ ತಕ್ಷಣ ವೈರಲ್ ಆಯಿತು. ಮಹಿಳೆ ವಿವಾಹಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಸ್ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಆರಾಮವಾಗಿ ಮಹಿಳೆಗೆ ಕಿಸ್ ಮಾಡಿದ್ದಾರೆ.

ವಿವಾಹಿತ ಮಹಿಳೆ ಈಗ ಭಾರೀ ಸುದ್ದಿಯಾಗಿದ್ದಾರೆ. ಅವಳ ಪತಿ ಎಲ್ಲೋ ಹೊರಗೆ, ತುಂಬಾ ಶಾಂತವಾಗಿರುತ್ತಾನೆ. ಆದರೆ ಶೋ ನೋಡೋಕೆ ಬಂದವರು ಇದನ್ನು ನೋಡಿ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ ಎಲ್ಲರೂ ಅದರ ಬಗ್ಗೆಯೇ ಮಾತನಾಡುತ್ತಿದ್ದು ವಿಡಿಯೋ ಭರ್ಜರಿ ವ್ಯೂಸ್ ಪಡೆದುಕೊಂಡಿದೆ. ಇನ್ನೊಂದಷ್ಟು ಜನ ಇದನ್ನು ಕಟುವಾಗಿ ಟೀಕಿಸಿದ್ದಾರೆ. ಕ್ರಿಸ್ ಬ್ರೌನ್ ಅವರು ವೇದಿಕೆಯ ಮುಂಭಾಗದಲ್ಲಿರುವ ಮಹಿಳೆಯ ಕಡೆಗೆ ಬಾಗುತ್ತಾರೆ. ಮೈಕ್ ಹಿಡಿದುಕೊಂಡೇ ಅವರು ಇಬ್ಬರೂ ಲಿಪ್ಲಾಕ್ ಮಾಡುತ್ತಾರೆ. ಅಷ್ಟೆ ಅಲ್ಲಅವಳು ಕೂಡ ಅವನ ಮುಖ ಮತ್ತು ಕುತ್ತಿಗೆಯನ್ನು ಹಿಡಿದಿದಳೆ, ಕ್ರಿಸ್ ಬ್ರೌನ್ ಕೂಡಾ ತಲ್ಲೀನರಾಗಿ ಕಿಸ್ ಮಾಡುತ್ತಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.