2026-06-08 03:53:39

NASA | ನಾಸಾದ ಐತಿಹಾಸಿಕ ಮಿಷನ್‌ ಉಡಾವಣೆ ಯಶಸ್ವಿ | Speed news kannada

 NASA | ನಾಸಾದ ಐತಿಹಾಸಿಕ ಮಿಷನ್‌ ಉಡಾವಣೆ ಯಶಸ್ವಿ | Speed news kannada

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 54 ವರ್ಷಗಳ ಬಳಿಕ ಚಂದಿರನ ಅನ್ವೇಷಣೆಗೆ ಹೊರಟಿರುವ ನಾಸಾದ ಆರ್ಟೆಮಿಸ್-(Artemis II) ಮಿಷನ್‌ ಉಡಾವಣೆ ಯಶಸ್ವಿಯಾಗಿದೆ. ಇನ್ನು ಚಂದ್ರನೆಡೆಗೆ ಅಧ್ಯಯನ ಮಾಡಲು ನಾಲ್ವರು ಗಗನಯಾತ್ರಿಗಳನ್ನು ನಾಸಾ ಕಳುಹಿಸಿದೆ. ಈ ಗಗನಯಾತ್ರಿಗಳಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್‌ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಸೇರಿದ್ದಾರೆ. ನಾಸಾ ಈ ಆರ್ಟೆಮಿಸ್ II ಮಿಷನ್ 10 ದಿನಗಳದ್ದಾಗಿದೆ. 10 ದಿನಗಳ ನಂತರ ಮತ್ತೆ ಮಿಷನ್‌ ಭೂಮಿಗೆ ಮರಳಬಹುದು ಈ ಮಿಷನ್ ನಲ್ಲಿ ನಾಲ್ಕು ಜನ ಸಿಬ್ಬಂದಿ ಇದ್ದು, ಇವರು ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಿಗೆ ಭೂಮಿಗೆ ಹಿಂತಿರುಗುವ ಮೊದಲು ಚಂದ್ರನ ಸುತ್ತ ಸುತ್ತಲಿದ್ದಾರೆ. ಭವಿಷ್ಯದಲ್ಲಿ ಮಾನವನನ್ನು ಚಂದ್ರನ ಮೇಲೆ ಇಳಿಸುವ ಮಿಷನ್‌ಗೆ ಮುನ್ನ, ಒರಾಯನ್ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಪರೀಕ್ಷಿಸುವುದು ಇದರ ಮುಖ್ಯ ಗುರಿಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.