2026-06-08 02:44:18

Nandini will shine in this years IPL KMF is the official partner of the RCB team | ಈ ಬಾರಿಯ IPL ನಲ್ಲಿ ಮಿಂಚಲಿದೆ ಹೆಮ್ಮೆಯ ನಂದಿನಿ RCB ತಂಡಕ್ಕೆ KMF ಅಧಿಕೃತ ಪಾಲುದಾರ | Speed News Kannada

Nandini will shine in this years IPL KMF is the official partner of the RCB team | ಈ ಬಾರಿಯ IPL ನಲ್ಲಿ ಮಿಂಚಲಿದೆ ಹೆಮ್ಮೆಯ ನಂದಿನಿ RCB ತಂಡಕ್ಕೆ KMF ಅಧಿಕೃತ ಪಾಲುದಾರ | Speed News Kannada

ಬೆಂಗಳೂರು : ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡದ ಈ ಬಾರಿಯ ಕ್ರೀಡಾ ಋತುವಿಗೆ ಕರ್ನಾಟಕ ಹಾಲು ಮಹಾಮಂಡಳಿ (KMF) ಅಧಿಕೃತ ಪಾಲುದಾರನಾಗಿ ಒಪ್ಪಂದ ಮಾಡಿಕೊಂಡಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಅಧಿಕೃತವಾಗಿ ತಿಳಿಸಿದ್ದಾರೆ.
ಈ ಮೂಲಕ ಸ್ಥಳೀಯ ಬ್ರಾಂಡ್ 'ನಂದಿನಿ'ಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಗುರುತಿಸುವಂತೆ ಮಾಡುವುದು ಮಂಡಳಿಯ ಉದ್ದೇಶವಾಗಿದೆ.
2026 ಆವೃತ್ತಿಯಲ್ಲಿ ಆರ್‌ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಿದೆ ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ. ಆರ್‌ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯಿಸಲಾಗುತ್ತದೆ ಕೆಎಂಎಫ್ ಉತ್ಪನ್ನ ಪ್ರಚಾರಕ್ಕೆ ವಿರಾಟ್, ಕೊಹ್ಲಿ ರಜತ್ ಪಾಟೀದಾರ್, ದೇವದತ್ತ ಪಡಿಕಲ್ 4 ಕೋಟಿ ವೆಚ್ಚದಲ್ಲಿ ಕೆಎಂಎಫ್ ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಶಿವ ಸ್ವಾಮಿ ಹೇಳಿಕೆ ನೀಡಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.