2026-06-08 01:24:59

Nandini Product | Pro Milk | ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ ಬಿಡುಗಡೆ | Speed News Kannada

Nandini Product | Pro Milk | ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ ಬಿಡುಗಡೆ | Speed News Kannada

ನಂದಿನಿಯಿಂದ ಮತ್ತೊಂದು ಬಿಗ್ ಅಪ್ಡೇಟ್ ಬಂದಿದ್ದು, ಗ್ರಾಹಕರ ಆರೋಗ್ಯ ಮತ್ತು ರುಚಿಗೆ ಹೊಸ ಆಯ್ಕೆ ಮಾಡಿದ ಕೆಎಂಎಫ್ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ  ನಂದಿನಿ ಬ್ರಾಂಡ್‌ನಡಿ ಹೊಸ ಉತ್ಪನ್ನಗಳ ಲಂಚ ಮಾಡಿದೆ. ಹೌದು,ಗುಡ್ ಲೈಫ್ ಹೈ ಆರೋಮ ತುಪ್ಪ, ಮೀಡಿಯಂ ಫ್ಯಾಟ್ ಪನೀರ್, ಹೈ ಪ್ರೋಟೀನ್ ಎನ್–ಪ್ರೋ ಮಿಲ್ಕ್, ಪ್ರೋಬಯಾಟಿಕ್ ಮೊಸರು, ಪ್ರೋಬಯಾಟಿಕ್ ಮಾವು ಮತ್ತು ಸ್ಟ್ರಾಬೆರಿ ಲಸ್ಸಿ, , ಕೆಲವ ಮತ್ತು ರೂ.10 ದರವಾಗಿದೆ ಹಸುವಿನ ಹಾಲು ಹಾಗೂ ಮೊಸರು — ಇವುಗಳನ್ನೆಲ್ಲಾ ಒಂದೇ ವೇದಿಕೆಯಲ್ಲಿ ಬಿಡುಗಡೆ ಗೊಳಿಸಿದ್ದು, ಈ ಎಲ್ಲಾ ಹೊಸ ಉತ್ಪನ್ನಗಳಿಗೆ QR ಕೋಡ್ ಭದ್ರತೆ, ಮತ್ತು ಗ್ರಾಹಕರಿಗೆ ಗುಣಮಟ್ಟದ ಭರವಸೆಯನ್ನ ನೀಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಹೊಸ ನಂದಿನಿ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕರು ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ಕೆ.ವೈ. ನಂಜೇಗೌಡ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಎಸ್. ಜಿಯಾವುಲ್ಲಾ IAS, ಕೆಎಂಎಫ್ ಆಡಳಿತಾಧಿಕಾರಿ ಟಿ.ಎಚ್.ಎಂ. ಕುಮಾರ್ IAS, ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮತ್ತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ KAS ಉಪಸ್ಥಿತರಿದ್ದರು.

ಐದು ದಶಕಗಳಿಂದ ಗೋವಿನಿಂದ ಗ್ರಾಹಕರವರೆಗೆ’ ಎಂಬ ಧ್ಯೇಯದೊಂದಿಗೆ 175ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿರುವ ನಂದಿನಿ, ಇಂದು ಕರ್ನಾಟಕದ ಮನೆಮಾತಾಗಿದ್ದು, ಹೊರ ರಾಜ್ಯ–ಹೊರ ದೇಶಗಳಲ್ಲಿಯೂ ವಿಶ್ವಾಸ ಪಡೆದ ಬ್ರಾಂಡ್ ಇದಾಗಿದೆ .....

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.