2026-06-08 01:25:37

Mrunal Thakur breaks dating gossip with Dhanush | ಧನುಷ್ ಜೊತೆ ಡೇಟಿಂಗ್ ಗಾಸಿಪ್‌ಗೆ ಮೃಣಾಲ್‌ ಠಾಕೂರ್ ಬ್ರೇಕ್ ಪ್ರೀಮಿಯರ್ ರಹಸ್ಯ ಬಯಲು | Speed News Kannada

Mrunal Thakur breaks dating gossip with Dhanush | ಧನುಷ್ ಜೊತೆ ಡೇಟಿಂಗ್ ಗಾಸಿಪ್‌ಗೆ ಮೃಣಾಲ್‌ ಠಾಕೂರ್ ಬ್ರೇಕ್ ಪ್ರೀಮಿಯರ್ ರಹಸ್ಯ ಬಯಲು | Speed News Kannada

ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸದ್ದು ಮಾಡಿತ್ತು. ಪ್ರೇಮಿಗಳ ದಿನದಂದು ಮದುವೆ ಆಗಲಿದ್ದಾರೆ ಎಂಬ ವದಂತಿಯೂ ಹರಡಿತ್ತು. ಆದರೆ ಆ ಎಲ್ಲ ಊಹಾಪೋಹಗಳಿಗೆ ಇದೀಗ ಮೃಣಾಲ್ ಸ್ಪಷ್ಟನೆ ನೀಡಿದ್ದಾರೆ.ಕಳೆದ ವರ್ಷ ಬಿಡುಗಡೆಯಾದ ಸನ್ ಆಫ್ ಸರ್ದಾರ್ 2 ಚಿತ್ರದ ಪ್ರೀಮಿಯ‌ರ್ ಶೋಗೆ ಧನುಷ್ ಹಾಜರಾಗಿದ್ದು ಗಾಸಿಪ್‌ಗೆ ಕಾರಣವಾಗಿತ್ತು. ಆ ಚಿತ್ರಕ್ಕೂ ಧನುಷ್ ಅವರಿಗೆ ಯಾವುದೇ ಸಂಬಂಧ ಇಲ್ಲದಿದ್ದರೂ ಅವರು ಆಗಮಿಸಿದ್ದರಿಂದ ಅಚ್ಚರಿ ಮೂಡಿತ್ತು.
ಈ ಬಗ್ಗೆ ಮಾತನಾಡಿದ ಮೃಣಾಲ್, "ನಾನು ಧನುಷ್ ಅವರ ದೊಡ್ಡ ಅಭಿಮಾನಿ. ತೇರೆ ಇಷ್ ಮೇ ಚಿತ್ರದ ಶೂಟಿಂಗ್ ವೇಳೆ ಅವರನ್ನು ಭೇಟಿ ಮಾಡಿ, ನಮ್ಮ ಚಿತ್ರದ ಪ್ರೀಮಿಯರ್‌ಗೆ ಬರಲು ನಾನು ಸ್ವತಃ ಆಹ್ವಾನಿಸಿದೆ. ಅವರು ಬರುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಅವರು ಬಂದರು. ನನಗೆ ಅದ್ಭುತ ಸಂತೋಷವಾಯಿತು" ಎಂದು ತಿಳಿಸಿದ್ದಾರೆ.
ಇನ್ನೂ ಒಂದು ದಿನ ಅವರ ಜೊತೆ ಕೆಲಸ ಮಾಡುವ ಆಸೆ ಇದೆ ಎಂದು ಮೃಣಾಲ್ ಹೇಳಿದ್ದಾರೆ. ಧನುಷ್ ನಟನೆಯ ರಾಯನ್, ಮಾರಿ, ರಾಂಜಾನಾ, ಕ್ಯಾಪ್ಟನ್ ಮಿಲ್ಲರ್ ಚಿತ್ರಗಳನ್ನು ನೋಡಿ ತಾವು ಫ್ಯಾನ್ ಆಗಿದ್ದಾಗಿ ತಿಳಿಸಿದ್ದಾರೆ. "ಅಸುರನ್ ಸಿನಿಮಾವನ್ನು ಎಷ್ಟು ಬಾರಿ ಬೇಕಾದರೂ ನೋಡುತ್ತೇನೆ" ಎಂದು ಮೃಣಾಲ್ ಸ್ಪಷ್ಟಪಡಿಸಿದ್ದಾರೆ. ಇದರಿಂದ ಡೇಟಿಂಗ್ ಗಾಸಿಪ್‌ಗಳಿಗೆ ತೆರೆ ಬಿದ್ದಂತಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.