2026-03-07 03:56:55

MP Basavaraja Bommai | ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ: ಸಂಸದ ಬಸವರಾಜ ಬೊಮ್ಮಾಯಿ | Speed News Kannada

 MP Basavaraja Bommai | ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ: ಸಂಸದ ಬಸವರಾಜ ಬೊಮ್ಮಾಯಿ | Speed News Kannada

ಹಾವೇರಿ: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯ ಪೂರ್ವಕವಾಗಿ ಅವರಿಗೆ ಹಣ ನೀಡುವ ಪ್ರಯತ್ನ ನಡೆದಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಪ್ರಕಾರ ಲಂಚ ಕೊಡುವ ಒತ್ತಾಯ ಮಾಡುವುದೂ ಕೂಡ ತಪ್ಪು ಹೀಗಾಗಿ ಎಲ್ಲ ಆಯಾಮಗಳಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕೆಂದು ಒತ್ತಾಯಿಸುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಂದ್ರು ಲಮಾಣಿ ಅವರ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಹೀಗಾಗಿ ಅದರಲ್ಲಿ ಯಾವುದೂ ಸ್ಪಷ್ಟತೆ ಇಲ್ಲ. ಲೋಕಾಯುಕ್ತರು ಕೇಸ್ ಹಾಕಿದ್ದಾರೆ. ತನಿಖೆ ನಂತರ ಸತ್ಯಾ ಸತ್ಯತೆ ಹೊರ ಬರುತ್ತದೆ. ಒಬ್ಬ ಯುವ ವೈದ್ಯರು ಒಳ್ಳೆಯ ಕೆಲಸ ಮಾಡುತ್ತಿರುವಾಗ ಒಂದು ಕರಿ ನೆರಳು ಅವರ ಸೇವೆಗೆ ಅಡ್ಡಿಯಾಗಿದೆ. ಲಂಚ ಕೊಡುವ ಒತ್ತಾಯ ಮಾಡುವುದೂ ಕೂಡ ಭಷ್ಟಾಚಾರ ನಿಗ್ರಹ ಕಾಯ್ದೆಯ ಪ್ರಕಾರ ತಪ್ಪು ಯಾವುದೇ ಒಬ್ಬರ ಸಾರ್ವಜನಿಕರ ಜೀವನವನ್ನು ಪಡ್ಯಂತ್ರದಿಂದ ಮುಗಿಸುವ ಕೆಲಸವನ್ನು ಯಾರೂ ಪೋತ್ಸಾಹ ಮಾಡಬಾರದು ಖಂಡಿಸಬೇಕು ಎಂದು ಹೇಳಿದರು.
ಗುತ್ತಿಗೆದಾರರ ಸಂಘದವರು ಮಾಡಿರುವ ಕಮಿಷನ್ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ. ಅವರು, ಕಾಂಗ್ರೆಸ್ ನಾಟಕ ಬಟಾ ಬಯಲಾಗಿದೆ. ಗುತ್ತಿಗೆದಾರರ ಸಂಘ ಒಂದೇ ಅಲ್ಲ. ಬೆಸ್ಕಾಂ ಗುತ್ತಿಗೆದಾರರ ಸಂಘ, ಪಿಡಬ್ಲ್ಯುಡಿ ಸಂಘ, ಎಲ್ಲ ಗುತ್ತಿಗೆದಾರರ ಸಂಘದವರು ಪತ್ರಿಕಾ ಗೋಷ್ಠಿ ಮಾಡಿ ಕಮಿಷನ್ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ನವರಿಗೆ ಈ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಎಸ್ಪಿ ವರ್ಗಾವಣೆ ಮಾಡಬೇಕು:
ಬಾಗಲಕೋಟೆಯಲ್ಲಿ ನಡೆದ ಗಲಾಟೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಲಾಟೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ. ಮಸೀದಿಯಿಂದ ಕಲ್ಲು, ಚಪ್ಪಲಿ ಬಿದ್ದಿದೆ. ಪಿತೂರಿ ಹಿಂದಿರುವವರನ್ನು ಬಿಟ್ಟು ಇತರರನ್ನು ಬಂಧಿಸಿದರೆ ಪಿತೂರಿ ಮಾಡುವವರು ಮುಂದೆಯೂ ಮಾಡುತ್ತಾರೆ ತುಷೀಕರಣ ಮಾಡುವ ಮೂಲಕ ಹಿಂದೂಗಳ ಹಬ್ಬ, ಮೆರವಣಿಗೆ, ಶಿವಾಜಿ ಜಯಂತಿ.. ಗಣೇಶ ಜಯಂತಿ ಕಾರ್ಯಕ್ರಮಗಳಲ್ಲಿ ನಿರಂತರ ಗಲಾಟೆ ಮಾಡಿಸುವುದು ನಡೆಯುತ್ತಿದೆ. ಬಾಗಲಕೋಟೆ ಎಸ್ಪಿಗೆ ಏಟು ಬಿದ್ದು ರಕ್ತ ಬರುತ್ತಿದ್ದರೂ ನನಗೇನು ಆಗಿಲ್ಲ ಎಂದು ಹೇಳುತ್ತಾರೆ. ಮೊದಲು ಅಲ್ಲಿನ ಎಸ್ಪಿ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳನ್ನು ವರ್ಗ ಮಾಡಬೇಕು ಎಂದು ಆಗ್ರಹಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.