2026-06-25 02:03:32

Money Scam |ಖತರ್ನಾಕ್ ದಂಪತಿಗಳಿಂದ ಕೋಟಿ-ಕೋಟಿ ಲೂಟಿ!| Speed news kannada

Money Scam |ಖತರ್ನಾಕ್ ದಂಪತಿಗಳಿಂದ ಕೋಟಿ-ಕೋಟಿ ಲೂಟಿ!| Speed news kannada

ಕೋರ್ಟ್‌ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡಡೆದಿದೆ. ಬಸವೇಸ್ವರ ಮೂಲದ ದಂಪತಿಗಳಾದ ಜೈಸನ್ ಡಿಸೋಜಾ, ಲವೀನಾ ಜೋಡಿ ಅಮಾಯಕ ಯುವಕರಿಗೆ ದೊಡ್ಡ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸ್ತೀವಿ, ಕೋರ್ಟ್‌ನಲ್ಲಿ ಕೆಲಸ ಕೊಡುಸ್ತೀವಿ ಅಂತ ಹೇಳಿ ಯುವಕರಿಂದ ಲಕ್ಷ ಲಕ್ಷ ಹಣ ದೋಚಿದ್ದಾರೆ.

ಸಮಾರು 500ಕ್ಕೂ ಹೆಚ್ಚಿನ ಜನರಿಗೆ ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾನೆ. ಕೋರ್ಟ್‌ನಲ್ಲಿ ಡಿ ಗ್ರೂಪ್‌ ಕೆಲಸ ಕೊಡಿಸೋದಾಗಿ ಹೇಳಿ ಒಬ್ಬೊಬ್ಬರಿಂದ 10 ರಿಂದ 25 ಲಕ್ಷದ ವರೆಗೆ ಹಣ ಪಡೆದು ವಂಚನೆಮಾಡಿದ್ದಾರೆ. ಕೋರ್ಟಿನ ನ್ಯಾಯಧೀಶರ ಸಹಿಯನ್ನು ನಕಲು ಮಾಡಿ ಯುವಕರಿಗೆ ನಕಲಿ ಆರ್ಡರ್‌ ಪ್ರತಿ ನೀಡಿ ಸುಮಾರು ಅಮಾಯಕ ಯುವಕರಿಂದ ಸುಮಾರು 25 ಕೋಟಿಗೂ ಅಧಿಕ ಹಣ ಪಡೆದು ಮೋಸಮಾಡಿದ್ದಾರೆ. ಇನ್ನೂ ಕೆಲಸ ಕೇಳಿದ್ರೆ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಕಥೆ ಕಟ್ಟಿ ಕೊನೆಗೆ ಫೋನ್‌ ರಿಸೀವ್‌ ಮಾಡದೇ ಕಳ್ಳಾಟ ಮಾಡ್ತಿದ್ದಾರೆ. ಇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರಿಗೆ ಸಂತ್ರಸ್ಥರು ದೂರು ನೀಡಿದ್ದಾರೆ.

ಸಿಸಿಬಿ ಪೊಲೀಸ್ರು ಈ ಪ್ರಕರನದ ಕುರಿತು ಬಸವೇಶ್ವರ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಖತರ್ನಾಕ್‌ ಜೋಡಿ ಹಿಂದೆ ಕೂಡ ಇದೇ ವಿಚಾರವಾಗಿ ಬಂಧನಕ್ಕೆ ಒಳಗಾಗಿ ರಿಲೀಸ್‌ ಆಗಿದ್ರು. ಈಗ ಮತ್ತೆ ಆದೇ ಚಾಳಿ ಮುಂದು ವರೆಸಿ  ಇದೀಗ ಪೊಲೀಸರ ಮನೆಗೆ ಅತಿಥಿಗಳಾಗಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.