2026-03-07 05:51:01

Mobile Thief! | ಮೊಬೈಲ್ ಕಳ್ಳನಿಗೆ ಕರ್ಮ ರಿಟರ್ನ್! | Speed News Kannada

Mobile Thief! | ಮೊಬೈಲ್ ಕಳ್ಳನಿಗೆ ಕರ್ಮ ರಿಟರ್ನ್! | Speed News Kannada

ಕೆಲವೊಮ್ಮೆ ತಪ್ಪು ಮಾಡಿದಾಗ ಕರ್ಮ ರಿಟರ್ನ್ಸ್ ಅನ್ನೋ ಪದವನ್ನು ಹೆಚ್ಚಿನವರು ಬಳಸುತ್ತಾರೆ. ಈ ಮಾತು ನಿಜ ಎನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿ. ಕಳ್ಳನೊಬ್ಬ ಬಸ್‌ನಲ್ಲಿದ್ದ ಪ್ರಯಾಣಿಕನ ಮೊಬೈಲ್ ಕದಿಯಲು ಮುಂದಾಗಿದ್ದಾನೆ. ಚಲಿಸುವ ಬಸ್‌ನ ಕಿಟಕಿಯಲ್ಲೇ ಸಿಲುಕಿಕೊಂಡು, ಸುಮಾರು ದೂರದವರೆಗೆ ನೇತಾಡಿದ್ದಾನೆ.
ಬಸ್ ಚಲಿಸುತ್ತಿರುವಾಗ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ ಚಲಿಸುವ ಬಸ್ಸಿನ ಹೊರಗೆ ನೆತಾಡುತ್ತಾ ಪ್ರಯಾಣಿಕರ ಕೈಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಸದ್ಯ ಇದರ ವಿಡಿಯೊ ವೈರಲ್ ಆಗಿದ್ದು, ತಕ್ಷಣದ ನ್ಯಾಯ ಸಿಕ್ಕಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ
ಬಸ್ ಚಲಿಸುತ್ತಿರುವಾಗ ಆ ವ್ಯಕ್ತಿ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಇದರಿಂದ ಅವನು ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದನು. ಆದರೆ ಅವನ ಪ್ಲಾನ್ ತಕ್ಷಣವೇ ಹಿಮ್ಮೆಟ್ಟಿದೆ.‌ ಬಸ್ಸಿನೊಳಗಿನ ಪ್ರಯಾಣಿಕರು ವೇಗವಾಗಿ ಪ್ರತಿಕ್ರಿಯಿಸಿ ಅವನ ಕೈಗಳನ್ನು ಕಿಟಕಿಯಿಂದಲೇ ಹಿಡಿದುಕೊಂಡಿದ್ದಾರೆ.
ಈ ವಿಡಿಯೊ ವೈರಲ್ ಆಗಿದ್ದು, ಜನರು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರು ಇಂತವರಿಗೆ ಇದು ಸರಿಯಾದ ಶಿಕ್ಷೆʼʼ ಆಗಬೇಕು ಎಂದು ತೀಳಿಸಿದ್ದರೆ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.