2026-03-07 05:49:12

MLA Bhairati Basavaraj sent to judicial custody | ಬಿಕ್ಲು ಶಿವ ಕೊಲೆ ಪ್ರಕರಣ ನ್ಯಾಯಾಂಗ ಬಂಧನಕ್ಕೆ ಶಾಸಕ ಭೈರತಿ ಬಸವರಾಜ್‌ | Speed News Kannada

MLA Bhairati Basavaraj sent to judicial custody | ಬಿಕ್ಲು ಶಿವ ಕೊಲೆ ಪ್ರಕರಣ ನ್ಯಾಯಾಂಗ ಬಂಧನಕ್ಕೆ ಶಾಸಕ ಭೈರತಿ ಬಸವರಾಜ್‌ | Speed News Kannada

ಬೆಂಗಳೂರು: ಕೆ ಆರ್‌ ಪುರದ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.
9 ದಿನಗಳ ಸಿಐಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಬೈರತಿ ಅವರನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಅವರನ್ನ .26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಮಾಸ್ಕ್ ಧರಿಸಿ ಬಂದ ಭೈರತಿ:
ಮುಖಕ್ಕೆ ಮಾಸ್ಕ್ ಧರಿಸಿ ಬೈರತಿ ಬಸವರಾಜು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆ ಮತ್ತೆ ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಮನವಿ ಮಾಡಿದರು. ಇನ್ನೂ ತನಿಖೆಗೆ ಪೂರ್ಣಗೊಂಡಿಲ್ಲ. ಆದ್ದರಿಂದ ಮತ್ತಷ್ಟು ತನಿಖೆ ನಡೆಸಲು ಇವರ ಅಗ್ತ ಇದೆ ಎಂದು ಸಿಐಡಿ ವಕೀಲರು  ವಾದ ಮಂಡಿಸಿದರು.
ಬಳಿಕ ಆರೋಪಿ ಪರ ವಕೀಲರು ಕೂಡ ಪ್ರತಿವಾದ ಮಾಡಿ, ಈಗಾಗಲೇ 9 ದಿನಗಳು ಕಸ್ಟಡಿಗೆ ನೀಡಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಕಸ್ಟಡಿಗೆ ನೀಡಬಾರದು ಎಂದು ತಿಳಿಸಿದರು.
ಬಿಕ್ಲು ಶಿವ ಕೊಲೆ ಕೇಸಲ್ಲಿ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ. ಫೆ.26ರವರೆಗೆ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಯದೇವ ಆಸ್ಪತ್ರೆಯಲ್ಲಿ ನೀಡಿರುವ ಡಯೆಟ್ ಪ್ಲಾನ್ ಅನ್ನು ಜೈಲಿನಲ್ಲಿ ಮುಂದುವರೆಸಲು ಕೋರ್ಟ್ ಸೂಚನೆ ನೀಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.