2026-05-04 06:50:35

mk stalin defeated in kolatturu, auto driver defeated ex minister| ಸ್ವಕ್ಷೇತ್ರದಲ್ಲೇ ಸಿಎಂ ಸ್ಟಾಲಿನ್‌ಗೆ ಸೋಲು: ಆಟೋ ಚಾಲಕನ ಎದುರು ಮಣಿದ ಮಾಜಿ ಸಚಿವ!| Speed News Kannada

mk stalin defeated in kolatturu, auto driver defeated ex minister| ಸ್ವಕ್ಷೇತ್ರದಲ್ಲೇ ಸಿಎಂ ಸ್ಟಾಲಿನ್‌ಗೆ ಸೋಲು: ಆಟೋ ಚಾಲಕನ ಎದುರು ಮಣಿದ ಮಾಜಿ ಸಚಿವ!| Speed News Kannada

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಹಲವು ಕಾರಣಗಳಿಗಾಗಿ ಇಡೀ ದೇಶದ ಗಮನ ಸೆಳೆಯುತ್ತಿದೆ. ಒಂದು ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಟಿವಿಕೆ ಪಕ್ಷದ ನಾಯಕ ನಟ ವಿಜಯ್‌ ಆಡಳಿತಾರೂಢ ಡಿಎಂಕೆ ಮತ್ತು ಡಿಎಂಡಿಕೆಯಂತಹ ದಶಕಗಳಷ್ಟು ಹಳೆಯದಾದ ಪಕ್ಷಗಳಿಗೆ ಮಣ್ಣು ಮುಕ್ಕಿಸಿದ್ದಾರೆ.  ಎರಡನೆಯದ್ದು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಸೋಲು.

ಡಿಎಂಕೆ ಅಧಿನಾಯಕರೂ ಆದ ಎಂ.ಕೆ. ಸ್ಟಾಲಿನ್ ಅವರು ತಮ್ಮ ಭದ್ರಕೋಟೆ ಕೊಳತ್ತೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್​.ಬಾಬು ಸೋಲುಣಿಸಿದ್ದಾರೆ.

ಹಲವು ವರ್ಷಗಳಿಂದ ಕೊಳತ್ತೂರು ಕ್ಷೇತ್ರ ಡಿಎಂಕೆಯ ಭದ್ರ ಕೋಟೆ. ಸ್ಟಾಲಿನ್ 2011ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2021ರ ಚುನಾವಣೆಯಲ್ಲಿ ಅವರು ಎಐಎಡಿಎಂಕೆ ಅಭ್ಯರ್ಥಿ ಆದಿ ರಾಜಾರಾಮ್ ವಿರುದ್ಧ 70,000ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.

 

ಆಟೋ ಚಾಲಕನಿಗೆ ಮಣಿದ ಮಾಜಿ ಸಚಿವರು!

ಟಿವಿಕೆ ಪಕ್ಷವು ಪೆರಂಬೂರ್ ಮತ್ತು ತಿರುಚಿ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ರಾಯಪುರಂ ಕ್ಷೇತ್ರದಲ್ಲಿ ಟಿವಿಕೆ ಪಕ್ಷದ ಅಭ್ಯರ್ಥಿ, ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ವಿಜಯ್ ಧಾಮು ಅವರು ಎಐಎಡಿಎಂಕೆಯ ಪ್ರಭಾವಿ ನಾಯಕ, ಮಾಜಿ ಸಚಿವ ಡಿ. ಜಯಕುಮಾರ್ ಮತ್ತು ಡಿಎಂಕೆ ಅಭ್ಯರ್ಥಿ ಸುಬೈರ್ ಖಾನ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದಾರೆ.

 

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.