2026-06-08 04:32:14

Minister M B Patil | ಇನ್ನು ಮುಂದೆ ಕೈಗಾರಿಕಾ ಅನುಮತಿ ಮತ್ತಷ್ಟು ಸಲೀಸು‌ ಶೀಘ್ರ ಸಚಿವ ಎಂ ಬಿ ಪಾಟೀಲ್ | Speed News Kannada

Minister M B Patil | ಇನ್ನು ಮುಂದೆ ಕೈಗಾರಿಕಾ ಅನುಮತಿ ಮತ್ತಷ್ಟು ಸಲೀಸು‌ ಶೀಘ್ರ ಸಚಿವ ಎಂ ಬಿ ಪಾಟೀಲ್ | Speed News Kannada

ಬೆಂಗಳೂರು: ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ನೀಡಬೇಕಾದರೆ ಹೂಡಿಕೆದಾರರಿಗೆ ಸುಲಲಿತ ವ್ಯವಹಾರ ವಾತಾವರಣ ನಿರ್ಮಾಣ ಸಂಬಂಧ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಕುರಿತು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಇಂದು ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಅವರು ಉದ್ದಿಮೆ ಆರಂಭಿಸಲು ನಾನಾ ಇಲಾಖೆ ಮತ್ತು ಸಂಸ್ಥೆಗಳ ಅನುಮೋದನೆಗಾಗಿ ಹಿಡಿಯುತ್ತಿರುವ ದೀರ್ಘ ಕಾಲಾವಕಾಶ ಹೂಡಿಕೆದಾರರಿಗೆ ಅಡಚಣೆಯಾಗುತ್ತಿತ್ತು. ಈ ಹಿಂದೆ ನಿಗದಿಪಡಿಸಿದ್ದ ಟೈಮ್ ಲೈನ್ ಗಳನ್ನು ಕಡಿತಗೊಳಿಸಿ, ಕಾಲಮಿತಿಯೊಳಗೆ ತ್ವರಿತವಾಗಿ ಅನುಮತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೈಗಾರಿಕೆ ಸ್ಥಾಪನೆಗೆ ಅಗತ್ಯವಾದ ಅನುಮತಿ, ನೀರು, ವಿದ್ಯುತ್, ಭೂ ಪರಿವರ್ತನೆ, ಪರಿಸರ ಅನುಮೋದನೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲು ಸ್ಪಷ್ಟ ಟೈಮ್ ಲೈನ್ ನಿಶ್ಚಯಿಸಲಾಗಿದೆ.
Time is Money! ಸಮಯ ಉಳಿಸಿದರೆ ಹೂಡಿಕೆ ಹೆಚ್ಚುತ್ತದೆ; ಹೂಡಿಕೆ ಹೆಚ್ಚಿದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ; ಉದ್ಯೋಗ ಸೃಷ್ಟಿಯಾದರೆ ರಾಜ್ಯದ ಆರ್ಥಿಕ ಶಕ್ತಿ ದ್ವಿಗುಣಗೊಳ್ಳುತ್ತದೆ. ಸುಲಲಿತ ವ್ಯವಹಾರ ವ್ಯವಸ್ಥೆ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿ, ರಾಜ್ಯವನ್ನು ಕೈಗಾರಿಕಾ ಹಾಗೂ ಉದ್ಯೋಗ ಸೃಷ್ಟಿಯ ಶಕ್ತಿಕೇಂದ್ರವನ್ನಾಗಿಸುವ ದಿಟ್ಟ ಹೆಜ್ಜೆ ಇದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, , KIADB ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.