2026-06-08 01:29:29

Mexico is in turmoil | ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲ ಅಮೆರಿಕ ಪಕ್ಕದ ದೇಶದಲ್ಲಿ ಘೋರ ಪರಿಸ್ಥಿತಿ | Speed News Kannada

Mexico is in turmoil | ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲ ಅಮೆರಿಕ ಪಕ್ಕದ ದೇಶದಲ್ಲಿ ಘೋರ ಪರಿಸ್ಥಿತಿ | Speed News Kannada

ಅಮೆರಿಕ ಮತ್ತು ಮೆಕ್ಸಿಕೋ ಅಕ್ಕಪಕ್ಕದ ದೇಶಗಳಾಗಿದ್ದು, ಮೆಕ್ಸಿಕೋ ಜೊತೆಗೆ ಅಮೆರಿಕ ಅಷ್ಟೊಂದು ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಇತ್ತೀಚೆಗೆ ನೇರವಾಗಿ ಮೆಕ್ಸಿಕೋ ಮೇಲೆ ದಾಳಿ ಮಾಡುವ ಬಗ್ಗೆ ಕೂಡ ಅಮೆರಿಕ ಚಿಂತನೆ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು.
ಹಾಗೇ ಎರಡೂ ದೇಶಗಳ ಮಧ್ಯೆ ತಿಕ್ಕಾಟ ಕೂಡ ಹೆಚ್ಚಾಗುತ್ತಾ ಸಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಾಗಾದರೆ ಉತ್ತರ ಅಮೆರಿಕದ ದೇಶದಲ್ಲಿ ಇದೀಗ ಆಗುತ್ತಿರುವುದು ಏನು? ಇಷ್ಟೊಂದು ಅಶಾಂತಿ ಮೂಡಲು ದಿಢೀರ್ ಕಾರಣ ಏನು?
ಮೆಕ್ಸಿಕೋ ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ, ಈ ಪೈಕಿ ಮಾದಕ ವಸ್ತುಗಳ ಸಾಗಾಣೆ ವಿಚಾರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪದೇ ಪದೇ ಇದೇ ವಿಚಾರವಾಗಿ ಮೆಕ್ಸಿಕೋ ದೇಶ ಕೆಟ್ಟ ಹೆಸರು ಕೂಡ ಪಡೆಯುತ್ತಿದ್ದು, ಅಮೆರಿಕ ಜೊತೆಗೆ ಕಿರಿಕ್ ಕೂಡ ಮುಂದುವರಿದಿದೆ.
ಇಷ್ಟೆಲ್ಲದರ ನಡುವೆಯೇ ದಿಢೀರ್ ದೊಡ್ಡ ನಿರ್ಧಾರ ಕೈಗೊಂಡಿದ್ದ ಮೆಕ್ಸಿಕೋ, ಅತ್ತ ಅಮೆರಿಕದ ಗುಪ್ತಚರ ಸಂಸ್ಥೆ ಆಗಿರುವ ಸಿಐಎ ಜೊತೆಗೆ ಸೇರಿ ಮಹತ್ವದ ಮಾಹಿತಿ ಪಡೆದು ಮಾದಕ ವಸ್ತುಗಳ ಸಾಗಾಣೆದಾರರ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿತ್ತು. ಇದೇ ಕಾರಣಕ್ಕೆ ಈಗ ಇಡೀ ಮೆಕ್ಸಿಕೋ ದೇಶ ಧಗಧಗ ಹೊತ್ತಿ ಉರಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಅಮೆರಿಕ & ಮೆಕ್ಸಿಕೋ ಜಂಟಿ ಕಾರ್ಯಾಚರಣೆ
ಮೆಕ್ಸಿಕೋ ದೇಶವೇ ಘೋಷಣೆ ಮಾಡಿದ್ದಂತೆ, ಮೆಕ್ಸಿಕೋ ದೇಶಕ್ಕೆ ಡ್ರಗ್ ಕಾರ್ಟೆಲ್ ವಿಚಾರವಾಗಿ ಮೋಸ್ಟ್ ವಾಟೆಂಡ್ ಆಗಿದ್ದ ಎಲ್ ಮೆಂಚೊ ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಗೆ ಮೊದಲು ಮೆಕ್ಸಿಕೋ ಭದ್ರತಾ ಪಡೆಗಳು ಸಾಕಷ್ಟು ಪರದಾಡಿದ್ದವು. ಅದರಲ್ಲೂ ಎಲ್ ಮೆಂಚೊ ಪತ್ತೆಗಾಗಿ ಮಾಡಿದ್ದ ಸಾಹಸ ಕೈಕೊಟ್ಟಿತ್ತು. ಆದರೆ ಅಂತಿಮವಾಗಿ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ ಎಂದರೆ ಸಿಐಎ ನೀಡಿರುವ ಮಾಹಿತಿ ಆಧರಿಸಿ, ಎಲ್ ಮೆಂಚೊ ಅಡಗಿದ್ದ ಸ್ಥಳವನ್ನು ಪಕ್ಕಾ ಪತ್ತೆಹಚ್ಚಿ ಹತ್ಯೆ ಮಾಡಿವೆ ಎನ್ನಲಾಗಿದೆ.

ಪರಿಸ್ಥಿತಿ ಹತೋಟಿಗೆ ತರಲು ಒದ್ಘಾಟ
ಎಲ್ ಮೆಂಚೊ ಹತ್ಯೆ ವಿಚಾರ ಈಗ ದೊಡ್ಡ ಸದ್ದು ಮಾಡುತ್ತಿದ್ದು, ಇತ್ತೀಚೆಗಷ್ಟೇ ಮಾದಕ ವಸ್ತುಗಳ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರು ಎಚ್ಚರಿಕೆ ಸಂದೇಶ ರವಾನಿಸಿದ್ದರು ಎಂಬುದು ಗಮನಾರ್ಹ ಸಂಗತಿ. ಹೀಗೆ ಅಮೆರಿಕ ಹಾಕಿದ ಒತ್ತಡಕ್ಕೆ ತಲೆಬಾಗಿ ಈಗ ಮೆಕ್ಸಿಕೋ ಮಹತ್ವದ ಕಾರ್ಯಾಚರಣೆ ನಡೆಸಿದೆಯಾ? ಎಂಬ ಚರ್ಚೆ ಕೂಡ ನಡೆಯುತ್ತಿದೆ. ಎಲ್ ಮೆಂಚೊ ಹತ್ಯೆಯ ನಂತರ, ಮಾದಕ ವಸ್ತುಗಳ ಕಳ್ಳ ಸಾಗಾಣೆ ಗುಂಪುಗಳು ಪರಸ್ಪರ ಬಡಿದಾಡುವ ಜೊತೆಗೆ, ಸರ್ಕಾರಿ ಆಸ್ತಿಗಳು ಹಾಗೂ ಸಾರ್ವಜನಿಕರ ಸ್ವತ್ತುಗಳಿಗೆ ಹಾನಿಯನ್ನು ಮಾಡುತ್ತಿದ್ದಾರೆ. ಹೀಗಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿರುವ ಮೆಕ್ಸಿಕೋ ಸರ್ಕಾರವು ಪರಿಸ್ಥಿತಿ ಹತೋಟಿಗೆ ತರಲು ಒದ್ದಾಡುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.