2026-06-25 03:46:19

Mexican drug cartel El Mencho killed | ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್‌ಪಿನ್ ಎಲ್ ಮೆಂಚೊ ಹತ್ಯೆ ಹಲವು ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರ | Speed News Kannada

Mexican drug cartel El Mencho killed | ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್‌ಪಿನ್ ಎಲ್ ಮೆಂಚೊ ಹತ್ಯೆ ಹಲವು ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರ | Speed News Kannada

ಗ್ವಾಡಲಜರ: ಕುಖ್ಯಾತ ಮಾದಕವಸ್ತು ದೊರೆ ಎಲ್ ಮೆಂಚೊ ನನ್ನು ಮೆಕ್ಸಿಕೋ ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ದೇಶದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಮಾದಕವಸ್ತು ದೊರೆ ನೆಮಸಿಯೊ "ಎಲ್ ಮೆಂಚೊ" ಒಸೆಗುರಾನನ್ನು ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ ಘೋಷಿಸಿದೆ. ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‌ನ 59 ವರ್ಷದ ಎಲ್ ಮಂಚೋ ಒಸೆಗುರಾ, ಜಲಿಸ್ಕೊ ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡು ಮೆಕ್ಸಿಕೊ ನಗರಕ್ಕೆ ಕರೆದೊಯ್ಯುವಾಗ ಸಾವನ್ನಪ್ಪಿದರು ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಅತನಿಗೆ 15 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. ಕಾರ್ಯಾಚರಣೆಯ ಸುದ್ದಿ ಬಹಿರಂಗವಾದ ನಂತರ ಜಲಿಸ್ಕೊ ಮತ್ತು ಇತರ ರಾಜ್ಯಗಳಲ್ಲಿ ಡ್ರಗ್ ಕಾರ್ಟೆಲ್‌ಗಳಿಂದ ರಸ್ತೆ ತಡೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ. ದಾಳಿಗೆ ಪ್ರತೀಕಾರವಾಗಿ ಬಂದೂಕುಧಾರಿಗಳು ಟಪಾ ಸೇರಿದಂತೆ ಪಶ್ಚಿಮ ಜಲಿಸ್ಕೊ ರಾಜ್ಯದಲ್ಲಿ 20 ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಬಂಧಿಸಿ, ಕಾರುಗಳು ಮತ್ತು ಟ್ರಕ್‌ಗಳನ್ನು ಸುಟ್ಟಿದ್ದು ಹಿಂಸಾಚಾರವು ಇತರ ರಾಜ್ಯಗಳಿಗೂ ಹರಡಿದೆ. ಮೆಕ್ಸಿಕನ್ ಅಧ್ಯಕ್ಷೆ ಕೌಡಿಯಾ ಶೀನ್‌ಬಾಮ್ ನಾಗರಿಕರನ್ನು ಶಾಂತವಾಗಿರಲು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯ ಅಧಿಕಾರಿಗಳೊಂದಿಗೆ ಸಮನ್ವಯದಲ್ಲಿದೆ ಎಂದು ಹೇಳಿದರು. ಮೆಕ್ಸಿಕೊದ ಮಿಲಿಟರಿ ಗುಪ್ತಚರ ಮಾಹಿತಿಯ ಜೊತೆಗೆ, ಯುಎಸ್ ಅಧಿಕಾರಿಗಳ "ಪೂರಕ ಮಾಹಿತಿ"ಯೊಂದಿಗೆ ದಾಳಿ ನಡೆಸಲಾಗಿದೆ ಎಂದು ಭಾನುವಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಸೆಗುರಾ ಜೊತೆಗೆ ಆರು ಶಂಕಿತ ಕಾರ್ಟೆಲ್ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.