2026-03-18 01:41:49

Marnus Labuschagne | ಹೈದರಾಬಾದ್ ತಂಡಕ್ಕೆ ಮಾರ್ನಸ್ ಲಬುಶೇನ್ ನಾಯಕ | Speed News Kannada

Marnus Labuschagne | ಹೈದರಾಬಾದ್ ತಂಡಕ್ಕೆ ಮಾರ್ನಸ್ ಲಬುಶೇನ್ ನಾಯಕ | Speed News Kannada

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಮೊದಲ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದು, ಬಯಸದೆ ಬಂದ ಭಾಗ್ಯವೆಂಬಂತೆ ತಮ್ಮ ಮೊದಲ ಸೀಸನ್‌ನಲ್ಲಿಯೇ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಲಬುಶೇನ್ ಹೈದರಾಬಾದ್ ಕಿಂಗ್ಸ್ಮೆನ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನ ಈ ಹೊಸ ತಂಡದ ಜವಾಬ್ದಾರಿಯನ್ನು ಮಾರ್ನಸ್ ಲಬುಶೇನ್ ವಹಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಘೋಷಿಸಿದೆ. ವಾಸ್ತವವಾಗಿ ಮಾರ್ನಸ್ ಲಬುಶೇನ್ ಅವರಿಗೆ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಅದರಲ್ಲೂ ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಲಬುಶೇನ್ ಕೇವಲ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದು. ಇದಲ್ಲದೆ, ಅವರು ಇಂಗ್ಲೆಂಡ್‌ ಟಿ20 ಬ್ಲಾಸ್ಟ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾರೆ. ಲಬುಶೇನ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಆಟಗಾರ, ಆದರೆ ಟಿ20 ಕ್ರಿಕೆಟ್‌ನಲ್ಲಿ ಅವರದ್ದು ದೊಡ್ಡ ಹೆಸರಲ್ಲ. ತಮ್ಮ ವೃತ್ತಿಜೀವನದಲ್ಲಿ ಕೇವಲ 55 ಟಿ20 ಪಂದ್ಯಗಳನ್ನು ಆಡಿರುವ ಲಬುಶೇನ್ 26.5 ಸರಾಸರಿಯಲ್ಲಿ 1381 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ 8 ಅರ್ಧಶತಕಗಳು ಸೇರಿವೆ. ಅಚ್ಚರಿಯ ಸಂಗತಿಯೆಂದರೆ ಹೈದರಾಬಾದ್ ಕಿಂಗ್ಸ್ಮೆನ್ ತಂಡದಲ್ಲಿ ಟಿ20 ಕ್ರಿಕೆಟ್‌ ಸ್ಮಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದಾರಾದರೂ ಅವರಿಗೆ ನಾಯಕತ್ವವನ್ನು ನೀಡಲಾಗಿಲ್ಲ. ಮ್ಯಾಕ್ಸ್‌ವೆಲ್ ಇಡೀ ಸೀಸನ್‌ಗೆ ಲಭ್ಯವಿಲ್ಲದಿರುವ ಸಾಧ್ಯತೆಯಿದೆ, ಅದಕ್ಕಾಗಿಯೇ ಲಬುಶೇನ್ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಹೈದರಾಬಾದ್ ಕಿಂಗ್ಸ್‌ಮೆನ್ ಸ್ಕ್ಯಾಡ್: ಮಾರ್ನಸ್ ಲಬುಶೇನ್ (ನಾಯಕ), ಸ್ಯಾಮ್ ಅಯೂಬ್, ಅಕಿಫ್ ಜಾವೇದ್, ಮಜ್ ಸದಾಕತ್, ಗ್ಲೆನ್ ಮ್ಯಾಕ್ಸ್‌ವೆಲ್, ಉಸ್ಮಾನ್ ಖಾನ್, ಮೊಹಮ್ಮದ್ ಅಲಿ, ಕುಸಾಲ್ ಪೆರೆರಾ, ಮೊಹಮ್ಮದ್ ಇರ್ಫಾನ್ ಖಾನ್, ಹಸನ್ ಖಾನ್, ಶಯಾನ್ ಜಹಾಂಗೀರ್, ಒಟ್ಟಿಯೆಲ್ ಬಾರ್ಟ್‌ಮನ್, ಹಮ್ಮದ್ ಅಜಮ್, ರಿಲೆ ಮೆರೆಡಿತ್, ಶಾರ್ಜೀಲ್ ಖಾನ್, ಆಸಿಫ್ ಮೆಹಮೂದ್, ಹುನೈನ್ ಶಾ, ರಿಜ್ವಾನ್ ಮೆಹಮೂದ್, ಸಾದ್ ಅಲಿ, ತಯ್ಯಬ್ ಆರಿಫ್.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.