2026-06-08 01:22:50

Marnami | ಕರಾವಳಿ ಸುಂದರ ಪ್ರೇಮಕಥೆ ಮಾರ್ನಾಮಿ ಮೆಚ್ಚಿದ ಸಿನಿ ಪ್ರೇಮಿಗಳು | Speed News Kannada

Marnami | ಕರಾವಳಿ ಸುಂದರ ಪ್ರೇಮಕಥೆ ಮಾರ್ನಾಮಿ ಮೆಚ್ಚಿದ ಸಿನಿ ಪ್ರೇಮಿಗಳು | Speed News Kannada

ಮಾರ್ನಾಮಿ ಸಿನಿಮಾ ರಿಲೀಸ್ ಆಗಿದೆ.. ಪ್ರತಿಯೊಂದು ಸಿನಿಮಾಗಳನ್ನು ಪ್ರೇಕ್ಷಕ ನೋಡಬೇಕು ಎಂದುಕೊಂಡಾಗ ಮೊದಲು ಟ್ರೇಲರ್ ನೋಡ್ತಾನೆ. ಅದರಲ್ಲಿ ಎಲ್ಲಾ ಅಂಶಗಳನ್ನು ಸೇರಿಸಿರ್ತಾರೆ, ಸಿನಿಮಾದ ಒಳಗೆ ಏನೆಲ್ಲಾ ಇದೆ ಅನ್ನೋದು ಅರ್ಥವಾಗುತ್ತೆ ಅಂತ. ಆದರೆ ಮಾರ್ನಾಮಿ ಸಿನಿಮಾ ಅದಕ್ಕೂ ಮೀರಿದ್ದಾಗಿದೆ ಅಂದ್ರೆ ನೀವೂ ನಂಭೀರಾ. ನೋಡಿದವರು ಖಂಡಿತಾ ನಂಬಾರೆ. ಟ್ರೇಲರ್ ನಲ್ಲಿರುವ ಅಂಶಗಳು ಕೂಡ ಸಿನಿಮಾದಲ್ಲಿವೆ. ಆದರೆ ಅದು ಸೆಕೆಂಡ್ ಆಫ್ ನಲ್ಲಿ ಕಾಣಿಸ್ತವೆ. ಸಿನಿಮಾದಲ್ಲಿ ಯಾವಾಗಲೂ ಕೊನೆ ಮೂಮೆಂಟ್ ನಲ್ಲಿ ಕಣ್ಣೀರಾಕ್ತಿವಿ ಅಲ್ವಾ. ಆದರೆ ಮಾರ್ನಾಮಿ ಇದ್ಯಲ್ಲ ಆರಂಭದಲ್ಲಿಯೇ ಮನಸ್ಸನ್ನ ಭಾರ ಮಾಡಿ ಬಿಡುತ್ತದೆ. ಮನಸ್ಪೂರ್ತಿಯಾ ಕಣ್ಣೀರಾಕಿ ಕಥೆ ನೋಡುತ್ತಾ ಕೂತವರಿಗೆ ಕರಾವಳಿಯ ಆಚರಣೆಗಳು, ಹುಲಿ ಕುಣತದ ಹಿಂದಿರುವ ಭಕ್ತಿ ಅಲ್ಲಿನ ಜನಗಳ ಭಕ್ತಿ ಎಲ್ಲವೂ ಖುಷಿ ನೀಡುತ್ತಾ ಹೋಗುತ್ತದೆ.ಕಥೆ ಶುರುವಾಗುವುದು ಸಮುದ್ರದ ಅಲೆಯ ದಡದಲ್ಲಿ ಕೂತೂ ಮೂವರು ಮಕ್ಕಳು ಗೋಲಿ. ಆಡುವ ಮೂಲಕ. ನಾಯಕ ಚೇತು ಮನೆ ಇರೋದೆ ಸಮುದ್ರ ದಡದಲ್ಲಿ. ಹುಟ್ಟುವುದಕ್ಕೂ ಮುನ್ನವೇ ಅಪ್ಪನನ್ನ ಕಳೆದುಕೊಳ್ಳುತ್ತಾನೆ. ಇನ್ನೇನು ಕನಸುಗಳು ಚಿಗುರುವಾಗ ತಾಯಿಯನ್ನ ಕಳೆದುಕೊಳ್ಳುತ್ತಾನೆ.
ಮಾವ ಅನಾಥನಾಗುವುದಕ್ಕೆ ಬಿಡುವುದೇ ಇಲ್ಲ. ಅಪ್ಪ ಅಮ್ಮನ ಪ್ರೀತಿ ಕೊಟ್ಟ ಮಾವನನ್ನ ಯಾರಾದ್ರೂ ಏನಾದ್ರೂ ಅಂದ್ರೆ ಬಿಡುವುದುಂಟೆ. ಚೇತು ದೊಡ್ಡವನಾದ ಮೇಲೆ ಎಲ್ಲರಿಗೂ ಇಷ್ಟವಾಗುತ್ತಾ ಹೋಗುತ್ತಾನೆ. ಆದರೂ ಮತ್ತೆ ಮತ್ತೆ ಅವನ ಬದುಕಲ್ಲಿಯೇ ದುರಂತ ನಡೆಯೋದು ನೋಡುಗರಿಗೆ ಪಾಪ ಅನ್ನಿಸುತ್ತೆ. ಈ ಸಿನಿಮಾದಲ್ಲೊಂದು ಕ್ಯುಟ್ ಲವ್ ಸ್ಟೋರಿ ಇದೆ. ಮದುವೆ ಆಗಿ, ಮಕ್ಕಳಾದ ಪೋಷಕರೇನಾದ್ರೂ ಈ ಸಿನಿಮಾ ನೋಡಿದ್ರೆ ಖಂಡಿತಾ ತಮ್ಮ ಹಳೇ ಕ್ರಶ್ ದಿನಗಳು ನೆನಪಾಗುತ್ತವೆ. ಚೈತ್ರಾ ಅಂತು ರಿಯಲ್ ಲೈಫ್ ನಲ್ಲಿ ಎಷ್ಟು ಜಾಲಿ ಜಾಲಿನೋ ಅಷ್ಟೇ ಜಾಲಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ರಿತ್ವಿಕ್ ನೋಡುಗರ ಮನಸ್ಸನ್ನ ಹೊಕ್ಕಿ ಬಿಡುವಷ್ಟು ಚೇತು ಪಾತ್ರವನ್ನ ಜೀವಿಸಿದ್ದಾರೆ. ಉಳಿದಂತೆ ಸೋನು ಗೌಡ, ಪ್ರಕಾಶ್ ತುಮಿನಾಡು, ಸ್ವರಾಜ್ ಶೆಟ್ಟಿ ಸುಮನ್ ತಲ್ವಾರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿಶಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ರೆ, ಶಿಲ್ಪಾ ನಿಶಾಂತ್ ನಿರ್ಮಾಣವನ್ನು ಮಾಡಿದ್ದಾರೆ.ಮಾರ್ನಾಮಿ ಸಿನಿಮಾ ರಿಲೀಸ್ ಆಗಿದೆ.. ಪ್ರತಿಯೊಂದು ಸಿನಿಮಾಗಳನ್ನು ಪ್ರೇಕ್ಷಕ ನೋಡಬೇಕು ಎಂದುಕೊಂಡಾಗ ಮೊದಲು ಟ್ರೇಲರ್ ನೋಡ್ತಾನೆ. ಅದರಲ್ಲಿ ಎಲ್ಲಾ ಅಂಶಗಳನ್ನು ಸೇರಿಸಿರ್ತಾರೆ, ಸಿನಿಮಾದ ಒಳಗೆ ಏನೆಲ್ಲಾ ಇದೆ ಅನ್ನೋದು ಅರ್ಥವಾಗುತ್ತೆ ಅಂತ. ಆದರೆ ಮಾರ್ನಾಮಿ ಸಿನಿಮಾ ಅದಕ್ಕೂ ಮೀರಿದ್ದಾಗಿದೆ ಅಂದ್ರೆ ನೀವೂ ನಂಬುತ್ತಿರಾ..

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.