2026-06-08 06:47:15

Marnami Releases On February 20th | ಫೆಬ್ರವರಿ 20ಕ್ಕೆ ಮಾರ್ನಮಿ‌ ಬಿಡುಗಡೆ | Speed News Kannada

Marnami Releases On February 20th | ಫೆಬ್ರವರಿ 20ಕ್ಕೆ ಮಾರ್ನಮಿ‌ ಬಿಡುಗಡೆ | Speed News Kannada

ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ‘ಮಾರ್ನಮಿ’ ಚಿತ್ರದ ಬಿಡುಗಡೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಚಿತ್ರಕ್ಕೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದ್ದು, ಫೆಬ್ರವರಿ 20ರಂದು ಚಿತ್ರ ತೆರೆಗೆ ಬರಲಿದೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ರಿತ್ವಿಕ್ ಮಠದ್ ಹಾಗು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಚೈತ್ರಾ ಆಚಾರ್ ನಟನೆಯ ಚಿತ್ರ ಇದು. ಚಿತ್ರದ ಮೂಲಕ ಕರಾವಳಿ ಸಂಸ್ಕೃತಿ, ಆಚರಣೆ ಭಾಷೆ, ಹುಲಿವೇಷ ಹೀಗೆ ಹಲವು ವಿಷಗಳನ್ನು ಕಟ್ಟಿಕೊಡಲಾಗಿದೆ. ಚಿತ್ರವನ್ನು ಶಿಲ್ಪಾ ನಿಶಾಂತ್ ನಿರ್ಮಾಣ ಮಾಡಿದ್ದು ರಿತೀಶ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ಮತ್ತು ಚರಣ್‍ರಾಜ್‍ ಸಂಗೀತವಿದೆ.  ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ , ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.