2026-06-08 01:26:57

Mani Ratnams new love story Film | ಮಣಿರತ್ನಂ ಹೊಸ ಪ್ರೇಮಕಥೆ ವಿಜಯ್ ಸೇತುಪತಿಗೆ ಜೋಡಿಯಾದ ಸಾಯಿ ಪಲ್ಲವಿ | Speed News Kannada

Mani Ratnams new love story Film | ಮಣಿರತ್ನಂ ಹೊಸ ಪ್ರೇಮಕಥೆ ವಿಜಯ್ ಸೇತುಪತಿಗೆ ಜೋಡಿಯಾದ ಸಾಯಿ ಪಲ್ಲವಿ | Speed News Kannada

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. 'ಥಗ್ ಲೈಫ್' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಮಣಿರತ್ನಂ ಈಗ ರೊಮ್ಯಾಂಟಿಕ್ ಪ್ರೇಮಕಥೆಯೊಂದನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.ಈ ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ಫ್ರೆಶ್ ಕಾಂಬಿನೇಷನ್ ಸಿನಿಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಮೂಲಗಳ ಪ್ರಕಾರ, ಈ ಕಥೆಯನ್ನು ಮೊದಲು ಧನುಷ್ ಅವರಿಗೆ ವಿವರಿಸಲಾಗಿತ್ತು. ಕಥೆ ಇಷ್ಟವಾದರೂ ಸಂಭಾವನೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಅವರು ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಬಳಿಕ ಸಿಂಬು ಹಾಗೂ ಧ್ರುವ್ ವಿಕ್ರಮ್ ಅವರ ಹೆಸರುಗಳು ಕೇಳಿಬಂದರೂ, ಅಂತಿಮವಾಗಿ ವಿಜಯ್ ಸೇತುಪತಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
'ಚೆಕ್ಕ ಚಿವಂತ ವಾನಂ' ಬಳಿಕ ಮಣಿರತ್ನಂ-ಸೇತುಪತಿ ಎರಡನೇ ಬಾರಿ ಕೈಜೋಡಿಸುತ್ತಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. ಸಾಯಿ ಪಲ್ಲವಿ ಮಣಿರತ್ನಂ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಮೊದಲು ರುಕ್ಕಿಣಿ ವಸಂತ್ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ.ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಮಣಿರತ್ನಂ ಅವರ ದೃಶ್ಯ ವೈಭವಕ್ಕೆ ರೆಹಮಾನ್ ಅವರ ಮೆಲೋಡಿ ಸೇರ್ಪಡೆ - ಸಿನಿಪ್ರೇಮಿಗಳಿಗೆ ಮತ್ತೊಂದು ಅದ್ಭುತ ಅನುಭವ ಸಿಗಲಿದೆಯೇ ಎಂಬ ನಿರೀಕ್ಷೆ ಗರಿಗೆದರಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.