2026-07-23 08:24:38

Man arrested for shooting at White House, Trump posts | ಶ್ವೇತ ಭವನದಲ್ಲಿ ಶೂಟೌಟ್‌ ನಡೆಸಿದ್ದ ವ್ಯಕ್ತಿಯ ಬಂಧನ, ಟ್ರಂಪ್‌ ಪೋಸ್ಟ್‌ |Speed news kannada

Man arrested for shooting at White House, Trump posts | ಶ್ವೇತ ಭವನದಲ್ಲಿ ಶೂಟೌಟ್‌ ನಡೆಸಿದ್ದ ವ್ಯಕ್ತಿಯ ಬಂಧನ, ಟ್ರಂಪ್‌ ಪೋಸ್ಟ್‌ |Speed news kannada

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಪೋಸ್ಟ್‌ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೋಟೆಲ್‌ನ ಬಾಲ್ ರೂಂನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್‌ನ ಮೊದಲ ಚಿತ್ರ ಹೊರಬಂದಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತದೆ. ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾಗಿದೆ. ಮೂಲತಃ ಕ್ಯಾಲಿಫೋರ್ನಿಯಾ ದಲ್ಲಿರುವ ಈ ವ್ಯಕ್ತಿಯು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಗೇಮ್‌ ಡೆವಲಪ್ಪರ್‌ ಕೂಡ ಆಗಿದ್ದಾನೆ. ದಾಳಿ ನಡೆಸೆಲೆಂದೆ ಪೂರ್ವ ತಯಾರಿ ಮಾಡಿಕೊಂಡಿದ್ದ ಥಾಮಸ್‌ ಮುಂಚೆ ಹೋಟೆಲ್‌ ಬುಕ್‌ ಮಾಡಿಕೊಂಡಿದ್ದ ಕಾರ್ಯಕ್ರಮಕ್ಕೆ ಬರುವಾಗ ಏರ್‌ ಗನ್‌ ಹಾಗೂ ಹ್ಯಾಂಡ್‌ ಗನ್‌ನನ್ನು ಸುಲಭವಾಗಿ ತಂದು ದಾಳಿ ನಡೆಸಿದ್ದಾನೆ. ದಾಳಿ ನಡೆಸಿದ ಕೂಡಲೇ ಎಚ್ಚೆತ್ತುಕೊಂಡ ಸುರಕ್ಷತಾ ಸಿಬ್ಬಂದಿಗಳು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ಆರೋಪಿಯ ಫೋಟೋವನ್ನು ಬಿಡುಗಡೆಮಾಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.